ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲ ಸಮಾಜಮುಖಿ ಕಾರ್ಯಗಳಿಗೂ ಹೆಸರುವಾಸಿ. ಚಿರಂಜೀವಿ (Megastar Chiranjeevi) ಸ್ಥಾಪಿಸಿರುವ ‘ಬ್ಲಡ್ ಬ್ಯಾಂಕ್’ (ರಕ್ತದಾನ ಕೇಂದ್ರ) ಈ ವರೆಗೆ ಸಾವಿರಾರು ಮಂದಿಯ ಜೀವ ಉಳಿಸಿದೆ.
ಇದೀಗ ಅಣ್ಣನ ಮಾರ್ಗದಲ್ಲೇ ನಡೆದಿರುವ ಸಹೋದರ ನಾಗಬಾಬು ಅವರು ಇಂತದ್ದೇ ಒಂದು ಮಹತ್ಕಾರ್ಯ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಿರಂಜೀವಿ ಸಹೋದರ ನಾಗಬಾಬುಗೆ ಇತ್ತೀಚೆಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಕೊರೊನಾ ಇಂದ ಬೇಗನೆ ಗುಣಮುಖರಾದರು ನಾಗಬಾಬು.
ಗುಣಮುಖವಾದ ನಂತರ ಇನ್ನೂ ಕೆಲವು ಕೊರೊನಾ ಸೋಂಕಿತರು ಗುಣಮುಖವಾಗುವಂತೆ ಸತ್ಕಾರ್ಯವೊಂದನ್ನು ಮಾಡಿದ್ದಾರೆ.
ಇದನ್ನೂ ಓದಿ : ಇಂದು ಚಿರು ನಮ್ಮೊಂದಿಗೆ ಇದ್ದಿದ್ರೆ 35 ವರ್ಷ ತುಂಬುತ್ತಿತ್ತು
ನಟ, ನಿರ್ಮಾಪಕ ನಾಗಬಾಬು ಅವರು ಪ್ಲಾಸ್ಮಾ ವನ್ನು ದಾನ ಮಾಡಿದ್ದಾರೆ. ಚಿರಂಜೀವಿ ಅವರ ಬ್ಲಡ್ ಬ್ಯಾಂಕ್ನಲ್ಲಿಯೇ ಅವರು ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ.
ಆ ಮೂಲಕ ಇನ್ನೂ ಕೆಲವರು ಕೊರೊನಾ ಇಂದ ಗುಣಮುಖವಾಗುವಂತೆ ಮಾಡಿದ್ದಾರೆ. ತಮ್ಮ ಮಾಡಿದ ಕಾರ್ಯವನ್ನು ಮನಸ್ಸಾರೆ ಹೊಗಳಿದ್ದಾರೆ ನಟ ಚಿರಂಜೀವಿ.
ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ನಲ್ಲಿ ದಾನ ಈ ಬಗ್ಗೆ ವಿಡಿಯೋ ಪ್ರಕಟಿಸಿರುವ ನಾಗಬಾಬು, ‘ಕೊರೊನಾ ದಿಂದ ಗುಣಮುಖವಾದ ಕಾರಣ ನನ್ನಲ್ಲಿ ರೋಗನಿರೋಧಕ ಅಂಶ ಬೆಳವಣಿಗೆ ಆಗುತ್ತಿರುತ್ತದೆ. ಆದ್ದರಿಂದ ನಾನು ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ನಲ್ಲಿ ಪ್ಲಾಸ್ಮಾ ದಾನ ಮಾಡುತ್ತಿದ್ದೇನೆ’ ಎಂದಿದ್ದಾರೆ.
ಇನ್ನೂ ತಮ್ಮನ ಕಾರ್ಯಕ್ಕೆ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿ ‘ಕೊರೊನಾ ಜೊತೆಗೆ ಗೆದ್ದಿದ್ದು ಮಾತ್ರವಲ್ಲದೆ ಪ್ಲಾಸ್ಮಾ ದಾನ ಮಾಡಿ ಇನ್ನೂ ಹಲವರು ಗುಣಮುಖ ಆಗುವಂತೆ ಮಾಡಿರುವ ನಾಗಬಾಬು ಗೆ ಧನ್ಯವಾದ ಎನ್ನುತ್ತಾ ಎಲ್ಲರೂ ಸಹ ಮುಂದೆ ಬಂದು ಪ್ಲಾಸ್ಮಾ ದಾನ ಮಾಡಿ, ಕೊರೊನಾವನ್ನು ಮಣಿಸೋಣ’ ಎಂದು ಕರೆಕೊಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel