meghana raj
ಇಂದು ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ ಚಿರು ಸರ್ಜಾ ಅವರ ಹುಟ್ಟುಹಬ್ಬದ. ಇತ್ತ ತುಂಬು ಗರ್ಭಿಣಿ ಮೇಘನರಾಜ್ ಪ್ರೀತಿಯ ಪರಿ ಚಿರು ಅವರಿಗೆ ಭಾವುಕವಾಗಿ ಪತ್ರ ಬರೆಯುವ ಮೂಲಕ ಶುಭಹಾರೈಸಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಸರ್ಜಾ ಗೆ ಶುಭಾಶಯ ಹೇಳಿರುವ ಮೇಘನಾ ರಾಜ್, ‘ನನ್ನ ಜಗತ್ತಿಗೆ ಹುಟ್ಟುಹಬ್ಬದ ಶುಭಾಶಯ, ಸದಾ ನಿನ್ನನ್ನು ಪ್ರೀತಿಸುವೆ’ ಎಂದಿದ್ದಾರೆ.
ಜೂನ್ 07 ರಂದು ಚಿರು ಸರ್ಜಾ ಅಗಲಿದ್ದರು. ಈ ಸುದ್ದಿ ಸರ್ಜಾ ಕುಟುಂಬಕ್ಕೆ ಅಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಚಿತ್ರರಂಗಕ್ಕೆ ಬರಸಿಡಿಲಂತೆ ಅಪ್ಪಳಿಸಿತ್ತು. ಇಡೀ ಸ್ಯಾಮಡಲ್ ವುಡ್ ಕಂಬನಿ ಮಿಡಿದಿತ್ತು. ಚಿರು ಅವರ ಅಗಲಿಕೆಯ ಬಳಿಕ ಇದು ಅವರ ಮೊದಲನೇ ಹುಟ್ಟುಹಬ್ಬವಾಗಿದೆ.
ಹಾಸ್ಯದಿಂದಲೇ ಜನರ ಮನಸ್ಸಿಗೆ ಹತ್ತಿರವಾದ ‘ಚಿಕ್ಕಿ’ ಸಿನಿಜರ್ನಿ..!
ಇನ್ನೂ ಅವರು ಇದ್ದಿದ್ದರೆ ಇವತ್ತಿಗೆ ಅವರಿಗೆ 35 ವರ್ಷ ತುಂಬಿರುತ್ತಿತ್ತು. ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾ ಶಿವಾರ್ಜುನ ಮತ್ತೊಮ್ಮೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದು, ಇಂದು ಸಂತೋಶ್ ಚಿತ್ರಮಂದಿರದ ಎದುರು ಚಿರಂಜೀವಿ ಸರ್ಜಾ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
meghana raj