ರಾಜಕೀಯ ಸ್ವಾರ್ಥಕ್ಕಾಗಿ ಮೇಕೆದಾಟು ಯೋಜನೆ ಮಾಡುತ್ತಿದ್ದಾರೆ: ನಟ ಚೇತನ್ Saaksha Tv
ಬೆಂಗಳೂರು: ಇತ್ತೀಚಿಗೆ ಮೇಕದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೇಸ್ ಪಾದಯಾತ್ರೆ ಪ್ರಾರಂಭಿಸಿತ್ತು, ಆದರೆ ಅದನ್ನು ಅರ್ಧಕ್ಕೆ ಮೊಟಕು ಗೊಳಿಸಿತು. ಈಗ ಮೇಕೆದಾಟು ಯೋಜನೆ ಕುರಿತು ನಟ ಚೇತನ ಅಸಮಾಧಾನ ಹೊರಹಾಕಿದ್ದಾರೆ. ಈ ಯೋಜನೆಯಿಂದ ಪರಿಸರ ನಾಶವಾಗುತ್ತಿದೆ, ಮೂರು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಕಾರಣಿಗಳು ಕಾಂಟ್ರ್ಯಾಕ್ಟರ್ ಸ್ವಾರ್ಥಕ್ಕೋಸ್ಕರ ಇದೆಲ್ಲ ಮಾಡುತ್ತಿದ್ದಾರೆ. ಈ ಯೋಜನೆಯು 9,000 ಕೋಟಿ ರೂಪಾಯಿಂದ ಕೂಡಿದೆ. ಯೋಜನೆಯು ಜಾರಿಯಾದರೆ ಸುತ್ತಮುತ್ತಲಿನ 12-18 ಸಾವಿರ ಎಕರೆ ಕಾಡು ನಾಶವಾಗುತ್ತದೆ. ಹಾಗೇ ಅಲ್ಲಿ ವಾಸಿಸುತ್ತಿರುವ ಶ್ರಮಜೀವಿಗಳನ್ನು ಒಕ್ಕಲೆಬ್ಬಿಸೋಕೆ ಪ್ರಯತ್ನಿಸುತ್ತಿದ್ದಾರೆ. ಅನೇಕ ರಾಜಕೀಯ ಶಕ್ತಿಗಳು ಅವರನ್ನು ಹೆದರಿಸುತ್ತಿದ್ದಾರೆ. ಈಗ ರಾಜಕಾರಣಿಗಳೇ ಕಾಂಟ್ರ್ಯಾಕ್ಟರ್, ಕಾಂಟ್ರ್ಯಾಕ್ಟರ್ಗಳೇ ರಾಜಕಾರಣಿಗಳಾಗಿದ್ದಾರೆ ಎಂದು ಚೇತನ್ ಕಿಡಿಕಾರಿದರು.
ಈ ಯೋಜನೆ ಕೈ ಬಿಟ್ಟು ಕೆರೆ-ಕುಂಟೆಗಳನ್ನು ನಿರ್ಮಾಣ ಮಾಡಬೇಕಿದೆ. ಅದರ ಜೊತೆಗೆ ನೀರಿನ ಮರುಬಳಕೆ ಆಗಬೇಕು. ಮಳೆ ನೀರು, ಒಳಚರಂಡಿ, ಪೋಲಾಗುತ್ತಿರುವ ನೀರನ್ನು ಸದ್ಬಳಕೆ ಮಾಡಬೇಕಿದೆ. ಹಾಗೇ ನಮ್ಮ ಪರಿಸರ ಉಳಿಸೋದು ಮುಖ್ಯ ಉದ್ದೇಶ ಆಗಬೇಕು. ಪರಿಸರ ಸ್ನೇಹಿಯಾಗಿ ನಡೆದುಕೊಂಡರೆ ನಾಡಿಗೆ ಒಳ್ಳೆದಾಗುತ್ತದೆ. ಈ ಯೋಜನೆ ತಮಿಳುನಾಡಿನ ವಿರುದ್ಧದ ವಿವಾದವಲ್ಲ. ಪರಿಸರ ಮೇಲಿನ ಯುದ್ಧ. ಎಂದು ಹೇಳಿದರು.
ಮೂರು ಪಕ್ಷಗಳು ಜನರ ಬದುಕಿನಲ್ಲಿ ಆಟವಾಡುತ್ತಿದ್ದಾರೆ. ರಾಜಕೀಯ ಕಾಂಟ್ರ್ಯಾಕ್ಟರ್ಗಳು ಮೇಕೆದಾಟನ್ನು ನಾಶ ಮಾಡಲು ಮುಂದಾಗಿದ್ದಾರೆ. 18 ಸಾವಿರ ಹೆಕ್ಟೇರ್ ಪ್ರದೇಶವನ್ನು ನಾಶಪಡಿಸಲು ರಾಜಕೀಯ ಪಕ್ಷಗಳು ಹಾತೊರೆಯುತ್ತಿವೆ.. ಮೇಕೆದಾಟು ಅಣೆಕಟ್ಟು ಯೋಜನೆ ಸರ್ಕಾರ ಕೈಬಿಡಬೇಕು. ತಮ್ಮ ಬೇಳೆ ಬೇಯಿಸಲು ಮೂರು ರಾಜಕೀಯ ಪಕ್ಷಗಳು ಮೇಕೆದಾಟು ವಿಚಾರ ಕೈಗೆತ್ತಿಕೊಂಡಿದೆ ಎಂದು ಮಾತನಾಡಡಿದರು.