ಮೇಕೆದಾಟು ಪಾದಯಾತ್ರೆಯಿಂದ ಟ್ರಾಫಿಕ್ ಜಾಮ್ ಉಂಟಾಗಿ ಕೋರ್ಟ್‌ಗೆ ಬರಲು ನ್ಯಾಯಮೂರ್ತಿಗಳಿಗೆ ಕಿರಿಕಿರಿಯಾಗಿತ್ತು..
ಇದರಿಂದ ಒಂದು ಗಂಟೆ ತಡವಾಗಿ ಕೋರ್ಟ್ ಕಲಾಪ ಆರಂಭವಾಗಿದೆ.. ಇದ್ರಿಂದಾಗಿ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸಂಚಾರಕ್ಕೆ ತೊಂದರೆ ಆಗುವಂತಹ ಸ್ಥಳಗಳಲ್ಲಿ ಪ್ರತಿಭಟನೆ ಬೇಡ ರ್ಯಾಲಿ, ಮೆರವಣಿಗೆ,ಧರಣಿಗೆ ಅನುಮತಿ ನೀಡಬೇಡಿ ಎಂದು ಸೂಚಿಸಿದೆ..
ಫ್ರೀಡಂ ಪಾರ್ಕ್ ಹೊರತು ಪಡಿಸಿ ಬೇರೆಲ್ಲೂ ಅವಕಾಶ ನೀಡಬೇಡಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ಹೊರಡಿಸಿದೆ.