Salam Aarati: ಮೇಲಕೋಟೆಯಲ್ಲಿ ಸಲಾಂ ಆರತಿ ಹೆಸರನ್ನು ತೆಗೆಯುವಂತೆ ಮನವಿ

1 min read
Melakote Chaluva Narayan Saaksha Tv

ಮೇಲಕೋಟೆಯಲ್ಲಿ ಸಲಾಂ ಆರತಿ ಹೆಸರನ್ನು ತೆಗೆಯುವಂತೆ ಮನವಿ

ಮಂಡ್ಯ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಸಲಾಂ ಆರತಿ ಹೆಸರನ್ನು ತೆಗೆಯುವಂತೆ ಸ್ಥಾನಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಂಧ್ಯಾರತಿ ಹೆಸರನ್ನು ಉಳಿಸಿಕೊಂಡು ಸಲಾಂ ಕೈ ಬಿಡಬೇಕು. ತ್ರಿಕಾಲದಲ್ಲಿ ದೇವರಿಗೆ ಆರತಿ ಮಾಡುವ ಪದ್ಧತಿ ಎಲ್ಲಾ ದೇವಾಲಯದಲ್ಲಿ ಇದೆ. ಸಂಜೆ ವೇಳೆ ಮೇಲುಕೋಟೆ ದೇವಾಲಯದಲ್ಲಿ ಸಂಧ್ಯಾರತಿಯನ್ನ ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬರಲಾಗಿದೆ ಎಂದು ಸ್ಥಾನಿಕ ಶ್ರೀನಿವಾಸ್ ಹೇಳಿದ್ದಾರೆ.

Melakote Saaksha Tv

ಮುಸ್ಲಿಂ ದಾಳಿಕೋರರಿಂದ ದಾಳಿಯಾದ ಸಂದರ್ಭದಲ್ಲಿ ಅಥವಾ ಟಿಪ್ಪುವಿನ ಕಾಲದಲ್ಲಿ ಸಂಧ್ಯಾರತಿಗೆ ಸಲಾಂ ಪದ ಸೇರಿದೆ. ಮೂಲ ಮೂರ್ತಿಗೆ ಆರತಿಯಾಗುವ ಸಂದರ್ಭದಲ್ಲಿ ದೇವಾಲಯದ ಹೊರಗಡೆ ದೀವಟಿಗೆ ಸಲಾಂ ಮಾಡಲಾಗುತ್ತೆ. ಬಳಿಕ ದೇವಾಲಯ ಗರ್ಭಗುಡಿಯ ಬಳಿಯು ದೀವಟಿಗೆ ಸಲಾಂ ಮಾಡಲಾಗುತ್ತೆ. ಚಲುವನಾರಾಯಣ ಸ್ವಾಮಿ ಎಲ್ಲಾ ಉತ್ಸವ ಮುಗಿಸಿ ಆಸ್ಥಾನಕ್ಕೆ ಬರುವ ವೇಳೆ ಈ ದೀವಟಿಗೆ ಸಲಾಂ ಮಾಡಲಾಗುತ್ತೆ ಎಂದರು.

ಸಂಧ್ಯಾರತಿಗೆ ಯಾರ ಆಕ್ಷೇಪಣೆ ಇಲ್ಲ. ಆದರೆ ಇಲ್ಲಿ ಹೇಳಲಾಗುವ ಸಲಾಂ ಪದಕ್ಕೆ ಎಲ್ಲರ ಆಕ್ಷೇಪಣೆ ಇದೆ. ಸಲಾಂ ಪದ ರದ್ದು ಮಾಡಲು ಹಲವು ವರ್ಷಗಳಿಂದ ಕೂಗಿದೆ. ಈ ವಿಚಾರವಾಗಿ ಸರ್ಕಾರ ಪರಿಶೀಲನೆ ಮಾಡಿ ಸಲಾಂ ಪದ ತೆಗೆಯಬೇಕು ಎಂದು ಮನವಿ ಮಾಡಿರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd