ಮೀಮ್ಸ್ ಮೂಲಕ ಹೆಸರು ಮಾಡಿದ್ದ ಚೀಮ್ಸ್ ಎಂಬ ನಾಯಿ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದೆ ಎನ್ನಲಾಗಿತ್ತು. ಹೀಗಾಗಿ ಅಭಿಮಾನಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದರು. ಆದರೆ, ಈ ನಾಯಿ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಅದರ ಮಾಲೀಕರು ಹೇಳಿದ್ದಾರೆ.
ಚೀಮ್ಸ್ ನಾಯಿಯ ಮಾಲೀಕರು ತಮ್ಮ Instagram ಪುಟದಲ್ಲಿ ಅದರ ಸಾವಿನ ದುಃಖದ ಸುದ್ದಿಯನ್ನು ತಿಳಿಸಿದ್ದಾರೆ. ಕೊನೆಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿತು ಎಂದು ಅವರು ಹೇಳಿದ್ದಾರೆ.
ಚೀಮ್ಸ್‌ಗೆ ಕೀಮೋಥೆರಪಿ ಅಥವಾ ಇತರ ಸಂಭವನೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ತಡವಾಗಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಲಕ್ಷಾಂತರ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಚೀಮ್ಸ್ ಕೆಲವು ಕಷ್ಟದ ತಿಂಗಳುಗಳನ್ನು ಎದುರಿಸುತ್ತಿರುವಾಗ ಚಿಕಿತ್ಸೆ ನೀಡಿದ ವೆಟ್ಸ್‌ಗೆ ಅದರ ಮಾಲೀಕರು ಧನ್ಯವಾದ ಹೇಳಿದ್ದಾರೆ.