ಬಾಲಿವುಡ್ ಸಿನಿಮಾದಲ್ಲಿ ವಿಜಯ್ ಸೇತುಪತಿ..! ಕತ್ರೀನಾ ಕೈಫ್ ನಾಯಕಿ..!
ತಮಿಳು ಹಾಗೂ ಇತರೇ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ವಿಜಯ್ ಸೇತುಪತಿ ವಿಲ್ಲನ್ ಹಾಗೂ ಹೀರೋ ಎರೆಡೂ ರೋಲ್ ಗಳನ್ನ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.. ಈಗ ವಿಜಯ್ ಸೇತುಪತಿ ಹಿಂದಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಬಾಲಿವುಡ್ ನ ಬ್ಯೂಟಿ ಕತ್ರಿನಾ ಕೈಫ್ ನಾಯಕಿಯಾಗಲಿದ್ದಾರೆ.. ಹೌದು ಬಾಲಿವುಡ್ ಗೆ ಎಂಟ್ರಿಕೊಟ್ಟಿರುವ ಸೇತುಪತಿ ಅವರ ಸಿನಿಮಾ ಅನೌನ್ಸ್ ಆಗಿದೆ.. ಈ ಚಿತ್ರಕ್ಕೆ ಚಿತ್ರಕ್ಕೆ ‘ಮೆರ್ರಿ ಕ್ರಿಸ್ಮಸ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಶೂಟಿಂಗ್ ಕೂಡ ಈಗಾಗಲೇ ಆರಂಭವಾಗಿದೆ.
ಕತ್ರೀನಾ ಕೈಫ್ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ಸೇತುಪತಿ ಮತ್ತು ಇಡೀ ಚಿತ್ರತಂಡದ ಫೋಟೊವನ್ನು ಕತ್ರೀನಾ ಕೈಫ್ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕತ್ರೀನಾ ಕೈಫ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅಭಿಮಾನಿಗಳಿಗೆ ಕತ್ರಿನಾ ಲುಕ್ ಹಿಡಿಸಲಿದೆ ಎನ್ನಲಾಗಿದೆ.
ಕ್ರಿಸ್ ಮಸ್ ಪ್ರಯುಕ್ತ ಈ ಸಿನಿಮಾದ ಟೈಟಲ್ ರಿವೀಲ್ ಮಾಡಲಾಗಿದೆ.. ಅಂಧಾದುನ್, ಬದ್ಲಾಪುರ್ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಶ್ರೀರಾಮ್ ರಾಘವನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಸೇತುಪತಿ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಇತ್ತ ಮದುವೆ ಬಳಿಕ ಮತ್ತೆ ಸಿನಿಮಾಗಳಲ್ಲಿ ಕತ್ರಿನಾ ಬ್ಯುಸಿಯಿದ್ದಾರೆ..








