ರೌಡಿಶೀಟರ್ ಪತ್ನಿಗೆ ಮೆಸೇಜ್ : ಯುವಕನಿಗೆ ಹಿಗ್ಗಾಮುಗ್ಗಾ ಥಳಿತ
ಬೆಂಗಳೂರು : ರೌಡಿಶೀಟರ್ ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಕೆಂಗೇರಿಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರೌಡಿಶೀಟರ್ ಗಳಾದ ಮನೋಜ್ ಗೂನ ಹಾಗೂ ಅಭಿ ಡಾಲ್ ಎಂಬುವರಿಂದ ಮಂಡ್ಯ ಮೂಲದ ಯುವಕನಿಗೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಮಂಡ್ಯ ಮೂಲದ ಕೊಪ್ಪದವನಾಗಿದ್ದ ಪುನೀತ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಈ ವೇಳೆ, ಪುನೀತ್ ಗೆ ರೌಡಿಶೀಟರ್ ಪತ್ನಿಯ ಪರಿಚಯವಾಗಿದ್ದು, ಚಾಟ್ ಮಾಡುತ್ತಿದ್ದನಂತೆ. ರಾಬರಿ ಕೇಸ್ ನಲ್ಲಿ ಜೈಲಿನಲ್ಲಿದ್ದ ಮನೋಜ್ ಹಾಗೂ ಆತನ ಸಹಚರ ರೌಡಿಶೀಟರ್ ಅಭಿ ಡಾಲ್ ಇತ್ತೀಚೆಗೆ ರಿಲೀಸ್ ಆಗಿದ್ದರು.
ಪತಿ ಜೈಲಲ್ಲಿದ್ದಾಗ ಮೆಸ್ಸೇಜ್ ಮಾಡುತ್ತಿದ್ದ ಮಹಿಳೆ, ಆತ ಹೊರ ಬಂದ ನಂತರವೂ ಮುಂದುವರಿಸಿದ್ದಾಳೆ. ಈ ವಿಚಾರ ಮನೋಜ್ ಗಮನಕ್ಕೆ ಬಂದಿದ್ದು, ಕೂಡಲೇ ಪುನೀತ್ ಗೆ ಕಾಲ್ ಮಾಡಿ ಮಾತನಾಡಬೇಕೆಂದು ಕೆಂಗೇರಿಗೆ ಕರೆಸಿ, ಹಿಗ್ಗಾಮುಗ್ಗ ಥಳಿಸಿದ್ದಾನೆ. ಆದ್ರೆ ಈ ಕುರಿತು ಪುನೀತ್ ಈವರೆಗು ಯಾವುದೇ ದೂರು ನೀಡಿಲ್ಲ.