Meta : ಮತ್ತೊಂದು ಸುತ್ತಿನ ಉದ್ಯೋಗ ಕಡಿತ – 10 ಸಾವಿರ ಮಂದಿ ಮನೆಗೆ ಕಳುಹಿಸಿದ ಫೆಸ್ಬುಕ್….
ಫೇಸ್ಬುಕ್ ಒಡೆತನ ಹೊಂದಿರುವ ಮೆಟಾ ಕಂಪನಿ ಇದೀಗ ಎರಡನೇ ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, 10,000 ಮಂದಿ ಉದ್ಯೋಗಿಗಳನ್ನ ಮನೆಗೆ ಕಳಿಸುವುದಾಗಿ ಮೆಟಾ ಕಂಪನಿ ಮಂಗಳವಾರು ತಿಳಿಸಿದೆ.
ಸಂಸ್ಥೆ ತೀವ್ರವಾದ ಆರ್ಥಿಕ ಕುಸಿತ ಎದುರಿಸುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೆಟಾ ಹೇಳಿಕೆ ನೀಡಿದೆ. 2022ರ ನವೆಂಬರ್ನಲ್ಲಿ ಮೆಟಾ ಸುಮಾರು 11,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಮೆಟಾದ 18 ವರ್ಷಗಳ ಇತಿಹಾಸದಲ್ಲೇ ಅದು ಮೊದಲ ಉದ್ಯೋಗ ಕಡಿತವಾಗಿತ್ತು. 2022ರ ಅಂತ್ಯದ ವೇಳೆಗೆ ಮೆಟಾ 86,482 ಉದ್ಯೋಗಿಗಳನ್ನು ಹೊಂದಿತ್ತು.
ಎರಡನೇ ಸುತ್ತಿನ ಸಾಮೂಹಿಕ ವಜಾ ಘೋಷಿಸಿದ ಮೊದಲ ತಂತ್ರಜ್ಞಾನ ಕಂಪನಿಯಾಗಿ ಮೆಟಾ ಗುರುತಿಸಲ್ಪಟ್ಟಿದೆ. ಉದ್ಯೋಗ ಕಡಿತಕ್ಕೆ ಸಂಬಂಧಿಸಿದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಕಂಪನಿಯ ಷೇರು ಮೌಲ್ಯದಲ್ಲಿ ಶೇ 6 % ಗಳಿಕೆ ಕಂಡು ಬಂದಿದೆ. 5,000 ಹುದ್ದೆಗಳಿಗೆ ನೇಮಕ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಕಂಪನಿ ಘೋಷಿಸಿದೆ.
Meta : Another round of job cuts – Facebook sent 10 thousand people home….