Bengaluru : ರಾಜ್ಯ ರಾಜಧಾನಿ ಬೆಂಗಳೂರಿಗೆ ಬಜೆಟ್ ನಿಂದ ಸಿಕ್ಕಿದ್ದೇನು..??
ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಚೊಚ್ಚಲ ಬಜೆಟ್ ಮಂಡಿಸಿದ್ದಾರೆ.. ವಿಧಾನಸಭೆಯಲ್ಲಿ ಮಂಡಿಸಲಾದ 2022ರ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೃಷಿ , ಆರೋಗ್ಯ , ಮಹಿಳಾ ಸಬಲೀಕರ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.. ಜೊತೆಗೆ ಎಲ್ಲಾ ಕ್ಷೇತ್ರಗಳಿಗೂ ಬಂಪರ್ ಕೊಡುಗೆ ನೀಡಲಾಗಿದೆ..
ರಾಜ್ಯ ರಾಜಧಾನಿ ಬೆಂಗಳೂರಿಗೆ ಬಜೆಟ್ ನಿಂದ ಸಿಕ್ಕಿದೆಷ್ಟು , ಹೊಸ ಯೋಜನೆಗಳು ಯಾವುವು..??
ಸ್ಮಾರ್ಟ್ ಸಿಟಿ ನಿರ್ಮಾಣ ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಬಾಕಿ ಇರುವ 1297 ಎಕರೆ ಭೂಸ್ವಾಧೀನ.
ಅಮೃತ್ ನಗರೋತ್ಥಾನ ಯೋಜನೆಯಡಿ ನಗರದ ಮೂಲಭೂತ ಸೌಕರ್ಯಕ್ಕಾಗಿ 3 ವರ್ಷಗಳಲ್ಲಿ 6000 ಕೋಟಿ ರೂ. ಅನುದಾನ.
ಹಳೆಯ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನರುಜ್ಜೀವನ ಮತ್ತು ಉನ್ನತೀಕರಣಕ್ಕಾಗಿ 1500 ಕೋಟಿ ರೂ. ಅನುದಾನ
2022–23 ರ ವೇಳೆಗೆ 312 ಕೋಟಿ ವೆಚ್ಚದ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾಮಗಾರಿ ಮುಕ್ತಾಯ.
ಕೆ–100 ಸಿಟಿಜನ್ ವಾಟರ್ ವೇ ಯೋಜನೆಯಡಿ ಕೆ.ಆರ್.ಮಾರುಕಟ್ಟೆ ಜಂಕ್ಷನ್ ನಿಂದ ಬೆಳ್ಳಂದೂರು ಕೆರೆಯ ವರೆಗೆ ಕೋರಮಂಗಳ ರಾಜಕಾಲುವೆಯ ಅಭಿವೃದ್ಧಿಗೆ 195 ಕೋಟಿ ರೂ. ಅನುದಾನ
11,250 ಕೋಟಿ ವೆಚ್ಚದ ನಮ್ಮ ಮೆಟ್ರೊ ಹಂತ–3 ಯೋಜನೆ ಜಾರಿಗೆ ಕೇಂದ್ರಕ್ಕೆ ಡಿಪಿ ಆರ್ ಸಲ್ಲಿಕೆ.
15,000 ಕೋಟಿ ವೆಚ್ಚದಲ್ಲಿ 37 ಕಿ.ಮೀ. ಉದ್ದದ ಹೊಸ ಮೆಟ್ರೊ ಮಾರ್ಗಕ್ಕೆ ಡಿಪಿಆರ್ ತಯಾರಿಕೆಗೆ ಕ್ರಮ