ನಾಯಂಡಹಳ್ಳಿ – ಕೆಂಗೇರಿ ನಡುವಿನ ಮೆಟ್ರೋ ಸೇವೆ ಆರಂಭ Metro saaksha tv
ಬೆಂಗಳೂರು : ನಾಯಂಡಹಳ್ಳಿ – ಕೆಂಗೇರಿ ನಡುವಿನ ಮೆಟ್ರೋ ವಿಸ್ತರಿತ ಮಾರ್ಗ ಲೋಕಾರ್ಪಣೆ ಆಗಿದೆ.
ಮೆಟ್ರೋ ರೈಲು ಸಂಚಾರಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಿದ್ದಾರೆ.
ಇದರೊಂದಿಗೆ ಇನ್ಮುಂದೆ ನಾಯಂಡಹಳ್ಳಿಯಿಂದ ಕೆಂಗೇರಿಯವರೆಗೆ ಮಟ್ರೋ ಸಂಚಾರವಿದ್ದು, ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.
ಇನ್ನು ನಾಯಂಡಹಳ್ಳಿ – ಕೆಂಗೇರಿ ವಿಸ್ತರಿತ ಮೆಟ್ರೋ ಮಾರ್ಗದಲ್ಲಿ, ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಸಾರ್ವಜನಿಕರ ಸೇವೆಗೆ ಮೆಟ್ರೋ ರೈಲು ಲಭ್ಯವಾಗಲಿದೆ.