ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ತಿಂಗಳುಗಳ ಕಾಲ ಬಂದ್ ಆಗಿದ್ದ ಮೆಟ್ರೋ ಇದೀಗ ಮತ್ತೆ ನಿಧಾನವಾಗಿ ಸಂಚಾರ ಆರಂಭಿಸಿದೆ. ಇದೀಗ ಪ್ರಯಾಣಿಕರಿಗೆ ಮೆಟ್ರೋ ನಿಗಮ ಗುಡ್ ನ್ಯೂಸ್ ಒಂದನ್ನ ನೀಡಿದೆ. ಈ ಮೊದಲು ಒಂದು ವರ್ಷಕ್ಕೆ ಸೀಮಿತವಾಗಿದ್ದ ಸ್ಮಾರ್ಟ್ ಕಾರ್ಡ್ ಗಳ ಅವಧಿಯನ್ನ 10 ವರ್ಷಗಳಿಗೆ ವಿಸ್ತರಿಸಿದೆ.
ಈ ಬಗ್ಗೆ ಮೆಟ್ರೋ ನಿಗಮ ಮಾಹಿತಿ ನೀಡಿದ್ದು, ಸ್ಮಾರ್ಟ್ ಕಾರ್ಡ್ ಗಳ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸಿರುವ ಬಗ್ಗೆ ತಿಳಿಸಿದೆ. ಇನ್ನೂ ಈ ಹಿಂದೆ ಪಡೆದ ಹಳೆ ಕಾರ್ಡ್ ಗಳಿಗೂ ಸಹ ಪರಿಷ್ಕೃತ ಬದಲಾವಣೆ ಅನ್ವಯವಾಗಲಿದ್ದು, ಹಳೆಯ ಹಾಗೂ ಹೊಸ ಕಾರ್ಡ್ ಅಷ್ಟೇ ಅಲ್ಲ ಇನ್ಮುಂದೆ ಪಡೆಯುವ ಹೊಸ ಸ್ಮಾರ್ಟ್ ಕಾರ್ಡ್‌ಗಳಿಗೂ ಇದು ಅನ್ವಯಿಸಲಿದೆ. ಅದ್ರಂತೆ, ಸ್ಮಾರ್ಟ್ ಕಾರ್ಡ್‍ಗಳನ್ನ 2030ರವರೆಗೂ ಬಳಸಲು ಅನುಮತಿ ನೀಡಲಾಗಿದೆ.








