Mexico ಈಗಿನ ಕಾಲದಲ್ಲಿ ಮಕ್ಕಳ ಚನ್ನಗಿ ಆರೋಗ್ಯವಾಗಿ ಹುಟ್ಟಿದರೆ ಸಾಕು ಎನ್ನುವ ದಿನಮಾನ ಇದಾಗಿದೆ .ಮಗು ಹುಟ್ಟೊವಾಗ ತಾಯಿ ಮಗುವಿಗೂ ಯಾವುದೆ ಸಮಸ್ಯೆ ಯಾಗದೆ ಇಬ್ಬರು ಚನ್ನಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ . ಆದರೆ ಅಪ್ಪಿತಪ್ಪಿ ಏನಾದರು ದುರ್ಘಟನೆ ಜರುಗಿದರೆ ವೈದ್ಯಕೀಯ ಜಗತ್ತು ಅದಕ್ಕೊಂದು ಪರಿಹಾರ ಕೊಟ್ಟೇ ಕೊಡುತ್ತದೆ ಎನ್ನುವುದು ದೊಡ್ಡ ಭರವಸೆ ಎಲ್ಲರಲ್ಲಿದೆ .
ಯಾಕಪ್ಪಾ ಇಗ ಈವಿಷಯ ಎಂದು ಯೋಚಿಸುತ್ತಿದ್ದರೆ. ಮೆಕ್ಸಿಕೋದ ನ್ಯೂವೋ ಲಿಯೋನ್ ಆಸ್ಪತ್ರೆಯೊಂದರೆಲ್ಲಿ
ಹೆಣ್ಣು ಮಗುವೊಂದು ವಿಚಿತ್ರ ಎನ್ನಿಸುವಂತೆ ಎರಡು ಇಂಚಿನ ಬಾಲದೊಂದಿಗೆ ಜನಿಸಿದೆ ಈ ಪೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ .
ಎರಡು ತಿಂಗಳ ಹಿಂದೆ ಜನಿಸಿದ ಹೆಣ್ಣು ಮಗುವಂದು ಮೂಲಕ ಈ ಮಗು ಜನಿಸಿತ್ತು. ಬಾಲದೊಂದಿಗೆ ಹುಟ್ಟಿದ ಮಗುವನ್ನು ನೋಡಿದ ವೈದ್ಯರು, ನರ್ಸ್ಗಳು ಮತ್ತು ಪೋಷಕರು ಆರಂಭದಲ್ಲಿ ಆತಂಕ ಮತ್ತು ಆಘಾತಕ್ಕೆ ಒಳಗಾಗಿದ್ದರು.
ಆದರೆ ಶಸ್ತ್ರಚಿಕಿತ್ಸೆಯ ಮೂಲಕ ಬಾಲವನ್ನು ತೆಗೆದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಮಗುವಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ವೈದ್ಯರು ದೃಢ ಪಡಿಸಿಧಾರೆ. ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ.
ಗರ್ಭಾವಸ್ಥೆಯಲ್ಲಿದ್ಧಾಗ ಮಗೂವಿಗೆ ಯಾವುದೇ ರೀತಿಯ ತೊಂದರೆ ಉಂಟಾಗಿರಲಿಲ್ಲ.
ಮೃದು ಚರ್ಮ ಮತ್ತು ಕೂದಲಿನಿಂದ ಕೂಡಿದ ಬಾಲವು ಬೆನ್ನಿನ ಕೆಳಗೆ ಎಡಭಾಗದಲ್ಲಿ ಇತ್ತು.
ಒಟ್ಟು 5.7 ಸಂ ಮೀ ಉದ್ದವನ್ನು ಹೊಂದಿತ್ತು. ಮಗುವಿನ ಬೆಳವಣಿಗೆಯಲ್ಲಿ ಸಹಜವಾಗಿತ್ತು , ತೂಕದಲ್ಲಿಯೂ ಹೆಚ್ಚಳವಾಗಿತ್ತು. ಎರಡು ತಿಂಗಳು ತುಂಬುತ್ತಿದ್ದಂತೆ ಸಣ್ಣ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಈ ಬಾಲವನ್ನು ಕತ್ತರಿಸಿ ತೆಗೆಯಲಾಗಿದೆ
ಈ ಎಲ್ಲ ಪ್ರಕ್ರೀಯೇಯು ಒಂದೆದಿನದಲ್ಲಿ ನಡೆದಿದ್ದು ದಿನ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಅದೇ ದಿನವೇ ಮಗುವನ್ನು ಡಿಸ್ಚಾರ್ಜ್ ಮಾಡಲಾಯಿತು.