MI vs LSG Match | ಮುಂಬೈ ವೈಫಲ್ಯಕ್ಕೆ ತಂಡದಲ್ಲಿರುವ ಗುಂಪುಗಾರಿಕೆ ಕಾರಣ…!!
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ.
ಆಡಿರುವ ಏಳು ಪಂದ್ಯದಲ್ಲಿ ಏಳೂ ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಜೊತೆಗೆ ಮೊದಲ ಗೆಲುವಿಗಾಗಿ ಕಾಯುತ್ತಿದೆ.
ಮುಂಬೈ ಇಂಡಿಯನ್ಸ್ ತಂಡದ ಈ ಸ್ಥಿತಿಗೆ ಅಲ್ಲಿರುವ ಗುಂಪುಗಾರಿಕೆ ಕಾರಣ ಎಂದು ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಕ್ರಿಸ್ ಲೀನ್ ಹೇಳಿದ್ದಾರೆ.
ಮುಂಬೈ ತಂಡ ಸೋಲು-ಗೆಲುವು ಎರಡನ್ನೂ ಅಭ್ಯಾಸ ಮಾಡಿಕೊಂಡಿದೆ.

ಮುಂಬೈಗೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಸಮಸ್ಯೆಗಳಿವೆ.
ಅವರ ಡ್ರೆಸ್ಸಿಂಗ್ ಕೋಣೆಯಲ್ಲಿ ಗುಂಪುಗಳಿವೆ ಎಂದು ತೋರುತ್ತಿದೆ.
ಮುಂಬೈ ತಂಡ ಶೀಘ್ರದಲ್ಲೇ ಸಣ್ಣ ಗುಂಪುಗಳಾಗಿ ವಿಭಜನೆಯಾಗುವ ಸಾಧ್ಯತೆಯಿದೆ.
ಇದು ತಂಡಕ್ಕೆ ಒಳ್ಳೆಯ ಲಕ್ಷಣವಲ್ಲ. ಮತ್ತೊಂದೆಡೆ ಪೊಲಾರ್ಡ್‌ನಂತಹ ಹಿರಿಯ ರೋಹಿತ್‌ಗೆ ಒತ್ತಡದಲ್ಲಿದ್ದಾಗ ಸಹಾಯ ಮಾಡಬೇಕು.
ಆದರೆ ತಂಡದಲ್ಲಿ ಅದು ಕಾಣಿಸಿಕೊಳ್ಳುತ್ತಿಲ್ಲ ಎಂದು ಕ್ರಿಸ್ ಲೀಗ್ ಹೇಳಿದ್ದಾರೆ.
ಅಂದಹಾಗೆ ಮುಂಬೈ ಇಂಡಿಯನ್ಸ್ ತಂಡ ನಾಳೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಡಲಿದೆ. mi-vs-lsg-match-chris-lynn-fractions-mumbai-indians-camp