MI vs LSG Match | ಮುಂಬೈ ತಂಡದ Probable XIs
ಇಂಡಿಯನ್ ಪ್ರಿಮಿಯರ್ ಲೀಗ್ ನ 37 ನೇ ಪಂದ್ಯದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡ, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಇಂದಿನ ಈ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ತಾನದಲ್ಲಿದೆ.
ಮುಂಬೈ ಇಂಡಿಯನ್ಸ್ ತಂಡ ಏಳು ಪಂದ್ಯಗಳನ್ನಾಡಿದ್ದು, ಒಂದೇ ಒಂದು ಪಂದ್ಯವನ್ನ ಈವರೆಗೂ ಗೆದ್ದಿಲ್ಲ. ಹೀಗಾಗಿ ಮೊದಲ ಗೆಲುವಿಗಾಗಿ ಇನ್ನೂ ಹಂಬಲಿಸುತ್ತಲೇ ಇದೆ.
ಮುಂಬೈ ಇಂಡಿಯನ್ಸ್ ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಚೆನ್ನೈ ತಂಡ ಮೂರು ವಿಕೆಟ್ ಗಳೊಂದಿಗೆ ಗೆಲುವು ಕಂಡಿದೆ.
ಮುಂಬೈ ಇಂಡಿಯನ್ಸ್ ತಂಡದ ವಿಚಾರಕ್ಕೆ ಬಂದರೇ ಬ್ಯಾಟಿಂಗ್ ನಲ್ಲಿ ಪರವಾಗಿಲ್ಲ ಅನಿಸಿದ್ರೂ ಬೌಲಿಂಗ್ ವಿಭಾಗ ಸಂಪೂರ್ಣ ಕಳಫೆಯಾಗಿದೆ.
ಜೊತೆಗೆ ಸಾಂಘಿಕ ಆಟದ ಕೊರತೆ, ಸತತ ಸೋಲುಗಳು ತಂಡದಲ್ಲಿ ನಿರಾಸೆಯನ್ನು ಮೂಡಿಸಿದೆ.
ಮುಂಬೈ ಪಂದ್ಯ ಗೆಲ್ಲಬೇಕಾದ್ರೆ 7 ಸೋಲುಗಳನ್ನು ಮರೆತು ಬ್ಯಾಟರ್ ಗಳು, ಬೌಲರ್ ಗಳು ಒಟ್ಟಾಗಿ ಪ್ರದರ್ಶನ ನೀಡಬೇಕಿದೆ.

ಮುಖ್ಯವಾಗಿ ಮುಂಬೈ ತಂಡಕ್ಕೆ ಈ ಬಾರಿ ಆರಂಭಿಕರು ಕೈ ಕೊಡುತ್ತಿದ್ದಾರೆ. ರೋಹಿತ್, ಕಿಶಾನ್ ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲುತ್ತಲೇ ಇಲ್ಲ.
ಡೆವಾಲ್ಡ್ ಬ್ರೆವಿಸ್ ಮಿಂಚಿ ಮರೆಯಾಗುತ್ತಿದ್ದಾರೆ. ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ ಇಬ್ಬರೇ ಮುಂಬೈನ ಸದ್ಯದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ.
ಕಿರಾನ್ ಪೊಲಾರ್ಡ್, ಡೆನಿಯನ್ ಸ್ಯಾಮ್ ಆಲ್ ರೌಂಡರ್ ಆಟ ಪ್ರದರ್ಶಿಸುತ್ತಿಲ್ಲ.
ರಿಲೆ ಮೆರೆಡಿತ್, ಹೃತಿಕ್ ಶೋಕಿನ್, ಬೂಮ್ರಾ, ಜಯದೇವ್ ಉನಾದ್ಕಟ್ ಬೌಲಿಂಗ್ ನಲ್ಲಿ ಪರಿಣಾಮಕಾರಿಯಾಗಿಲ್ಲ.
ಸದ್ಯ ಮುಂಬೈ ಫಾರ್ಮ್ ಅತ್ಯಂತ ಕಳಪೆಯಾಗಿದ್ದು, ಇಂದಿನ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆಗನ್ನು ನಿರೀಕ್ಷಿಸಲಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ಸಂಭಾವ್ಯ ತಂಡ
ಇಶಾನ್ ಕಿಶನ್ (WK), ರೋಹಿತ್ ಶರ್ಮಾ (c), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಡೇನಿಯಲ್ ಸಾಮ್ಸ್, ರಿಲೆ ಮೆರೆಡಿತ್, ಹೃತಿಕ್ ಶೋಕೀನ್, ಜಸ್ಪ್ರೀತ್ ಬುಮ್ರಾ, ಜಯದೇವ್ ಉನದ್ಕತ್
ಕಳೆದ ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ತಂಡವನ್ನು 18 ರನ್ ಗಳಿಂದ ಸೋಲಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಿದೆ. mi-vs-lsg-match-Probable XIs ipl 2022