MI vs SRH Match | ಸನ್ ರೈಸರ್ಸ್ ತಂಡದಲ್ಲಿ ಯಾರು ಇನ್ ಯಾರು ಔಟ್..?
ಕೇನ್ ವಿಲಿಯಮ್ ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದು ತನ್ನ ಈ ಸೀಸನ್ ನ 13ನೇ ಪಂದ್ಯವನ್ನಾಡಲಿದೆ. ಇದು ಸನ್ ರೈಸರ್ಸ್ ತಂಡಕ್ಕೆ ಡು ಆರ್ ಡೈ ಪಂದ್ಯವಾಗಿದೆ.
ಯಾಕಂದರೇ 15ನೇ ಸೀಸನ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇನ್ನುಳಿದ ಪಂದ್ಯಗಳು ಅಂತಿಮ ನಾಲ್ಕರ ಘಟ್ಟದಲ್ಲಿ ಇರೋರು ಯಾರು ಎಂಬುದನ್ನ ತಿಳಿಸಲಿದೆ.
ಹೀಗಾಗಿ ಪ್ರತಿಯೊಂದು ಪಂದ್ಯ ಅತ್ಯಂತ ರೋಚಕ ಮತ್ತು ಕುತೂಹಲವನ್ನ ಕೆರಳಿಸಿದೆ.
ಅದರಂತೆ ಇಂದು ಇಂಡಿಯನ್ ಪ್ರಿಮಿಯರ್ ಲೀಗ್ ನ 65 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ಪ್ಲೇ ಆಫ್ಸ್ ದೃಷ್ಠಿಯಿಂದ ಸನ್ ರೈಸರ್ಸ್ ಹೈದರಾಬಾದ್ ಗೆ ಭಾರಿ ಮಹತ್ವ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಗೆದ್ದರೇ ಸನ್ ರೈಸರ್ಸ್ ತಂಡ ಪ್ಲೇ ಆಫ್ಸ್ ಹತ್ತಿರವಾಗುವ ಸಾಧ್ಯತೆಗಳಿವೆ.
ಮುಖ್ಯವಾಗಿ ಈ ಪಂದ್ಯ ಕೇನ್ ವಿಲಿಯಂ ಸನ್ ನಾಯಕತ್ವ ಹೈದರಾಬಾದ್ ತಂಡಕ್ಕೆ ಭಾರಿ ಮಹತ್ವದ್ದಾಗಿದೆ.
ಯಾಕಂದರೇ ಕಳೆದ ನಾಲ್ಕು ಪಂದ್ಯಗಳಲ್ಲಿ ಹೈದರಾಬಾದ್ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಜೊತೆಗೆ ಪ್ಲೇ ಆಫ್ಸ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಕನಸು ಕೂಡ ಹೈದರಾಬಾದ್ ತಂಡಕ್ಕಿದೆ. ಆದ್ರೆ ಇದು ಅಷ್ಟು ಸುಲಭದ ಕೆಲಸವಲ್ಲ.
ಯಾಕಂದರೇ ಹೈದರಾಬಾದ್ ತಂಡ ಮೊದಲಿನ ಟಚ್ ನಲಿಲ್ಲ. ಸನ್ ರೈಸರ್ಸ್ ತಂಡದ ಗೆಲುವು ನಿರ್ಧಾರವಾಗೋದೆ ಬೌಲರ್ ಗಳ ಪ್ರದರ್ಶನದ ಮೇಲೆ, ಆದ್ರೆ ಕಳೆದ ಮೂರು ಪಂದ್ಯಗಳಲ್ಲಿ ಹೈದರಾಬಾದ್ ಬೌಲರ್ ಗಳು ಕಳಫೆ ಪ್ರದರ್ಶನ ನೀಡುತ್ತಿದ್ದಾರೆ.
ಮುಖ್ಯವಾಗಿ ಅನಾನುಭವಿ ಬೌಲಿಂಗ್ ಅಟ್ಯಾಕ್ ಹೈದರಾಬಾದ್ ತಂಡಕ್ಕೆ ಮುಳುವಾಗುತ್ತಿದೆ. ಭುವನೇಶ್ವರ್ ಕುಮಾರ್ ಒಬ್ಬರನ್ನ ಬಿಟ್ಟರೇ ಇನ್ನುಳಿದವರು ವಿಕೆಟ್ ಪಡೆಯುತ್ತಿಲ್ಲ.
ಆದ್ರೆ ಇಂದಿನ ಪಂದ್ಯಕ್ಕೆ ಟಿ ನಟರಾಜನ್ ಮತ್ತು ವಾಷಿಂಗ್ ಟನ್ ಸುಂದರ್ ತಂಡ ಸೇರಿಕೊಳ್ಳುವುದರಿಂದ ತಂಡಕ್ಕೆ ಆನೆ ಬಲತಂದಿದೆ.
ಇನ್ನು ಬ್ಯಾಟಿಂಗ್ ವಿಚಾರಕ್ಕೆ ಬಂದರೇ ಹೈದರಾಬಾದ್ ತಂಡದ ಬ್ಯಾಟಿಂಗ್ ಡಿಸೇಂಟ್ ಆಗಿದೆ. ರಾಹುಲ್ ತ್ರಿಪಾಟಿ, ಅಭಿಷೇಕ್ ಶರ್ಮಾ, ಮಾರ್ಕ್ರಾಂ, ನಿಕೋಲಸ್ ಪೂರನ್ ತಂಡಕ್ಕೆ ನೆರವಾಗುತ್ತಿದ್ದಾರೆ.
ಆದ್ರೆ ಕೇನ್ ವಿಲಿಯಂ ಸನ್ ಮಾತ್ರ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇಂದಿನ ಪಂದ್ಯದಲ್ಲಿ ವಾಷಿಂಗ್ ಟನ್ ಸುಂದರ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿರುವುದು ಬ್ಯಾಟಿಂಗ್ ವಿಭಾಗದ ಜೊತೆಗೆ ಬೌಲಿಂಗ್ ಕೂಡ ತಾಕತ್ತು ಪಡೆದುಕೊಳ್ಳಲಿದೆ.
ಅಂದಹಾಗೆ ನಾಯಕತ್ವ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಸೀಸನ್ ನಲ್ಲಿ 12 ಪಂದ್ಯಗಳನ್ನಾಡಿದೆ. ಇದರಲ್ಲಿ ಐದು ಪಂದ್ಯಗಳಲ್ಲಿ ಗೆದ್ದು, ಏಳು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 12 ಅಂಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.
ತಂಡದ ಪ್ಲೇಯಿಂಗ್ ಇಲೆವೆನ್ ನೋಡೋದಾದ್ರೆ
ಅಭಿಷೇಕ್ ಶರ್ಮಾ
ಕೇನ್ ವಿಲಿಯಂ ಸನ್
ರಾಹುಲ್ ತ್ರಿಪಾಟಿ
ಐಡನ್ ಮಾರ್ಕ್ರಂ
ನಿಕೋಲಸ್ ಪೂರನ್
ಶಶಾಂಕ್ ಸಿಂಗ್
ವಾಷಿಂಗ್ ಟನ್ ಸುಂದರ್
ಮಾರ್ಕೋ ಜಾನ್ಸನ್
ಭುವನೇಶ್ವರ್ ಕುಮಾರ್
ಟಿ ನಟರಾಜನ್
ಉಮ್ರಾನ್ ಮಲ್ಲಿಕ್
mi-vs-srh-match-Sunrisers Hyderabad – Mumbai Indians