MI VS UPW : ಟಾಸ್ ಗೆದ್ದ ಯೂಪಿ ಬೌಲಿಂಗ್ ಆಯ್ಕೆ…. MI 56 /2
ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್) 15ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ನಡುವೆ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಇಂದು ಡಬಲ್ ಹೆಡರ್ ದಿನವಾಗಿದ್ದು, ಎರಡನೇ ಪಂದ್ಯ ಪಂದ್ಯ ಗುಜರಾತ್ ಮತ್ತು ಬೆಂಗಳೂರು ನಡುವೆ ರಾತ್ರಿ 7:30 ರಿಂದ ನಡೆಯಲಿದೆ.
ದಿನದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಮೊದಲು ಬ್ಯಾಟ್ ಮಾಡಿದ ಮುಂಬೈ 10 ಓವರ್‌ಗಳಲ್ಲಿ ಎರಡು ವಿಕೆಟ್ ಗೆ 56 ರನ್ ಗಳಿಸಿದೆ. ಹೇಲಿ ಮ್ಯಾಥ್ಯೂಸ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಕ್ರೀಸ್‌ನಲ್ಲಿದ್ದಾರೆ. ನಟಾಲಿ ಸೀವರ್ ಬ್ರಂಟ್ 5 ಮತ್ತು ಯಾಸ್ತಿಕಾ ಭಾಟಿಯಾ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಆಡಿರುವ ಐದೂ ಪಂದ್ಯಗಳನ್ನ ಗೆದ್ದಿರುವ ಮುಂಬೈ ಈಗಾಗಲೇ ಪ್ಲೇ ಆಫ್ ಎಂಟ್ರಿ ಕೊಟ್ಟಿದೆ. ಮತ್ತೊಂದೆಡೆ ಯುಪಿ ವಾರಿಯರ್ಸ್ ಐದು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಮೂರು ಸೋಲು ಕಂಡಿದೆ. ಪ್ಲೇ ಆಫ್ ಗೆ ಏರಲು ಯೂಪಿ ವಾರಿಯರ್ಸ್ ಗೆ ಈ ಪಂದ್ಯದ ಗೆಲುವು ಅನಿವಾರ್ಯವಾಗಿದೆ.
ಪ್ಲೇಯಿಂಗ್ ಇಲೆವನ್ 11 :
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ಕ್ಯಾಪ್ಟನ್), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪಾರ್ಶ್ವಿ ಚೋಪ್ರಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.
ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ಸಿ), ಯಾಸ್ತಿಕಾ ಭಾಟಿಯಾ (ವಾಕ್), ಹೇಲಿ ಮ್ಯಾಥ್ಯೂಸ್, ನಟಾಲಿ ಸ್ಕಿವರ್ ಬ್ರಂಟ್, ಅಮೆಲಿಯಾ ಕೆರ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಇಸಾಬೆಲ್ ವಾಂಗ್, ಅಮಾನ್‌ಜೋತ್ ಕೌರ್, ಜಿಂಟಿಮಣಿ ಕಲಿತಾ ಮತ್ತು ಸೈಕಾ ಇಶಾಕ್.
MI VS UPW : UP won the toss bowling selection…. MI 56 /2