ಅಮೆರಿಕಾದಲ್ಲಿ ಬಾಲಕನಿಂದ ಗುಂಡಿನ ದಾಳಿ 3 ಸಾವು ಹಲವರಿಗೆ ಗಾಯ
15 ವರ್ಷದ ವಿದ್ಯಾರ್ಥಿಯೊಬ್ಬ ಮಂಗಳವಾರ ತನ್ನ ಅಮೆರಿಕದ ಮಿಚಿಗನ್ ಡೆಟ್ರಾಯಿಟ್ ಬಳಿಯ ಹೈಸ್ಕೂಲ್ನಲ್ಲಿ ಮನಸೋ ಇಚ್ಚೇ ಗುಂಡು ಹಾರಿಸಿದ್ದಾನೆ. ಈ ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಒಬ್ಬ ಶಿಕ್ಷಕ ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ.
ಮಧ್ಯಾಹ್ನ ಆಕ್ಸ್ ಫರ್ಡ್ ಹೈಸ್ಕೂಲ್ ನಲ್ಲಿ ತರಗತಿಗಳು ನಡೆಯುತ್ತಿರುವಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ 16 ವರ್ಷದ ಬಾಲಕ 14 ಮತ್ತು 17 ವರ್ಷದ ಬಾಲಕಿಯರು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಆರೋಪಿ ಬಾಲಕನಿಂದ ಅಧಿಕಾರಿಗಳು ಗನ್ ವಶಪಡಿಸಿಕೊಂಡಿದ್ದಾರೆ. ಗಾಯಗೊಂಡ ಬಾಲಕರನ್ನ ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಘಟನೆಯ ನಂತರ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಅಮೇರಿಕಾದ ಅಧ್ಯಕ್ಷ್ ಜೋ ಬೈಡನ್ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ. ಮಕ್ಕಳನ್ನ ಕಳೆದುಕೊಂಡ ದುಖಃ ಹೇಳಲಾಗದು. ಮೃತರ ಕುಟುಂಸ್ಥರಿಗೆ ಈ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.