ವಾಣಿಜ್ಯ ( ಕಮರ್ಶಿಯಲ್) ಸಿಲಿಂಡರ್ ಗಳ ಬೆಲೆ ಮತ್ತೆ ಹೆಚ್ಚಳ
ಡಿಸೆಂಬರ್ ತಿಂಗಳ ಮೊದಲ ದಿನವೇ ಜನ ಸಾಮಾನ್ಯನ ಜೇಬಿಗೆ ಕತ್ತರಿ ಬಿದ್ದಿದೆ. ದೇಶದ ಸರ್ಕಾರಿ ತೈಲ ಕಂಪನಿಗಳು ಡಿಸೆಂಬರ್ 1 ರಿಂದ LPG ಗ್ಯಾಸ್ ಸಿಲಿಂಡರ್ ಗಳ ದರವನ್ನ ಹೆಚ್ಚಿಸಿವೆ. 19 ಕೆ ಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನ 103 ರುಪಾಯಿಷ್ಟು ಹೆಚ್ಚಿಸಿದ್ದು, ಕಮರ್ಶಿಯಲ್ ಗ್ಯಾಸ್ ಸಿಲಿಂಡರ್ ಗಳ ಬೆಲೆ ಇಂದಿನಿಂದ 2101 ರೂ ಹೆಚ್ಚಾಗಲಿದೆ.
ಗೃಹ ಬಳಕೆಯ ಸಿಲಿಂಡರ್ ಏರಿಕೆಯಾಗಿಲ್ಲ
ಶ್ರೀ ಸಾಮಾನ್ಯ ನಿಟ್ಟುಸಿರು ಬಿಡುವ ಸುದ್ದಿಯೆಂದರೆ ಗೃಹ ಬಳಕೆಯ ಸಿಲಿಂಡರ್ ಗಳ ಬಳಕೆಯಲ್ಲಿ ಏರಿಕೆಯಾಗಿಲ್ಲ . ದೆಹಲಿಯಲ್ಲಿ 14.2 ಕೆ ಜಿ ಸಬ್ಸಿಡಿ ರಹಿತ ಎಲ್ ಪಿ ಜಿ ಸಿಲಿಂಡರ್ ಬೆಲೆ 899.50 ರೂ ಇದ್ದೂ ಬದಲಾಗದೆ ಹಾಗೆ ಉಳಿದಿದೆ.
ಸಬ್ಸಿಡಿ ರಹಿತ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ
ದೆಹಲಿ – 899.50 ರೂ
ಚೆನೈ – 915.50 ರೂ
ಕೋಲ್ಕತ್ತ -926 ರೂ
ಮುಂಬೈ – 899.50 ರೂ








