Jammu and Kashmir |ಕಾರ್ಮಿಕನ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು…
ನಿನ್ನೆ ಗುರುವಾರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸೋದನಾರಾ ಸುಂಬಲ್‌ನಲ್ಲಿ ಉಗ್ರಗಾಮಿಗಳು ಕಾರ್ಮಿಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಬಿಹಾರ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಕಾರ್ಮಿಕನನ್ನು ಮೊಹಮ್ಮದ್ ಅಮ್ರೇಜ್ ಎಂದು ಗುರುತಿಸಲಾಗಿದೆ ಈತ ಮೂಲತಃ ಬಿಹಾರದ ಮಾಧೇಪುರದವರು. ಗುಂಡು ತಗುಲಿದ ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
“ಮಧ್ಯರಾತ್ರಿಯಲ್ಲಿ ಭಯೋತ್ಪಾದಕರು ಕಾರ್ಮಿಕ ಮೊಹಮ್ಮದ್ ಅಮ್ರೇಜ್ S/O ಮೊಹಮ್ಮದ್ ಜಲೀಲ್ R/O ಮಾಧೇಪುರ ಅವರ ಮೇಲೆ ಮೇಲೆ ಗುಂಡು ಹಾರಿಸಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಅಲ್ಲಿ ಅವರು ಸಾವನ್ನಪ್ಪಿದರು” ಎಂದು ಕಾಶ್ಮೀರ ಟ್ವೀಟ್ ಮಾಡಿದೆ.
ಗುರುವಾರ ರಜೌರಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಯತ್ನಿಸಿದ ಇಬ್ಬರು ಭಯೋತ್ಪಾದಕರನ್ನ ತಟಸ್ಥಗೊಳಿಸುವ ಸಂದರ್ಭದಲ್ಲಿ ನಾಲ್ವರು ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಗುರುವಾರ ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಸುಬೇದಾರ್ ರಾಜೇಂದ್ರ ಪ್ರಸಾದ್, ರೈಫಲ್‌ಮ್ಯಾನ್ ಮನೋಜ್ ಕುಮಾರ್ ಮತ್ತು ರೈಫಲ್‌ಮ್ಯಾನ್ ಲಕ್ಷ್ಮಣನ್ ಡಿ ಅವರು ದೇಶಕ್ಕಾಗಿ ಹುತಾತ್ಮತರಾಗಿದ್ದರು. ಆದಾಗ್ಯೂ, ಸೇನಾ ಸಿಬ್ಬಂದಿ ಆತ್ಮಾಹುತಿ ಬಾಂಬ್ ದಾಳಿಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದರು ಮತ್ತು ಇಬ್ಬರೂ ಭಯೋತ್ಪಾದಕರನ್ನ ಹೊಡೆದುರುಳಿಸಿದರು.