ರೈತರು ಇತ್ತೀಚೆಗೆ ಕೃಷಿಯಲ್ಲಿ ಸಾಕಷ್ಟು ಪ್ರಯೋಗ ಅನುಸರಿಸುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಾದ ಹಣ್ಣು ತರಕಾರಿ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಒಂದು ಹಳ್ಳಿ ಮೂಸಂಬಿ ಹೆಸರುವಾಸಿಯಾಗಿದೆ. ಹೀಗಾಗಿ ಇದನ್ನು ಮೂಸಂಬಿ ಗ್ರಾಮ ಎಂದೇ ಕರೆಯುತ್ತಾರೆ. ಗ್ರಾಮದ ಪ್ರತಿಯೊಬ್ಬ ರೈತರು ಮೂಸಂಬಿ ಕೃಷಿ ಮಾಡುತ್ತಾರೆ.
ಬೀಡ್ ಜಿಲ್ಲೆಯ ಶಿರಸ್ಮಾರ್ಗ್ ಗ್ರಾಮವು ಮೂಸಂಬಿ ಗ್ರಾಮವೆಂದು ಪ್ರಸಿದ್ಧವಾಗಿದೆ. ಸುಮಾರು 5 ಸಾವಿರ ಜನರಿರುವ ಈ ಗ್ರಾಮದಲ್ಲಿ ಮೊದಲು ಸಾಂಪ್ರದಾಯಿಕ ಕೃಷಿ ಮಾಡಲಾಗುತ್ತಿತ್ತು. 2002ರಲ್ಲಿ ಗ್ರಾಮದ ಇಬ್ಬರು ರೈತರಾದ ಅನಿಲ್ ಪಾವಲ್ ಮತ್ತು ಸಂಭಾಜಿ ಪಾವಲ್ ಆರು ಎಕರೆಯಲ್ಲಿ ಮೂಸಂಬಿ ಬೆಳೆದಿದ್ದರು. ಆ ಕಾಲದಲ್ಲೇ ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯ ಬಂದಿತ್ತು. ಹೀಗಾಗಿ ಈ ಕುಟುಂಬ ಈ ಬೆಳೆಯ ಬೆನ್ನು ಬಿದ್ದಿತು.
ನಂತರ ಅನೇಕ ರೈತರು ಪಾವಲ್ರ ಹೊಲಗಳಿಗೆ ಭೇಟಿ ನೀಡಿ ಈ ಪ್ರಯೋಗವನ್ನು ಕಲಿತುಕೊಂಡರು. ಅವರೂ ಕೂಡ ತಮ್ಮ ಹೊಲಗಳಲ್ಲಿ ಮೂಸಂಬಿ ಬೆಳೆಯಲು ಪ್ರಯತ್ನಿಸಿದರು. ಹೀಗಾಗಿ ಸದ್ಯ ಇಲ್ಲಿನ ರೈತರು ಮೂಸಂಬಿ ಕೃಷಿಯಿಂದ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಮೂಸಂಬಿಯಿಂದ ಗ್ರಾಮದ ವಾರ್ಷಿಕ ವಹಿವಾಟು 30ರಿಂದ 35 ಕೋಟಿ ವಹಿವಾಟು ಮಾಡುತ್ತಿದ್ದಾರೆ.








