ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಬ್ಬು ಭಸ್ಮ
ಕಲಬುರಗಿ: ಕಬ್ಬು ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ತಿಪ್ಪಣ್ಣ ಮುದಬುಳ, ಬಸವರಾಜ ಪಂಚಾಳ, ಚಂದ್ರಕಾಂತ ಅವರಿಗೆ ಸೇರಿದಂತೆ ಹಲವು ರೈತರ ಹತ್ತಾರು ಎಕ್ಕರೆಯ ಕಬ್ಬು ಬೆಂಕಿಗಾಹುತಿ ಆಗಿದೆ. ಕಬ್ಬಿಗೆ ತಗುಲಿದ ಬೆಂಕಿಯನ್ನು ನಂದಿಸಲು ರೈತರು ಹರಸಾಹಸ ಪಟ್ಟು ಪರದಾಡಿದರು. ಕಣ್ಣಮುಂದೆಯೇ ಸುಟ್ಟು ಹೋದ ಕಬ್ಬು ಬೆಳೆ ಕಂಡು ರೈತರು ಆಕ್ರಂದಿಸುತ್ತಿದ್ದಾರೆ.
ಬೆಳೆದ ಕಬ್ಬು ಕಳೆದುಕೊಂಡು ನಷ್ಟಕ್ಕೆ ಸಿಲುಕಿರುವ ಅನ್ನದಾತರು ಪರಿಹಾರ ನೀಡುವಂತೆ ಅಂಗಲಾಚುತ್ತಿದ್ದಾರೆ. ಸರಿಯಾದ ಸಮಯಕ್ಕೆ ಕಬ್ಬು ಕಟಾವು ಮಾಡದೇ ಕೆಪಿಆರ್ ಸಕ್ಕರೆ ಫ್ಯಾಕ್ಟರಿ ಮೋಸ ಮಾಡಿದೆ. ಇದೀಗ ಆಕಸ್ಮಿಕ ಬೆಂಕಿ ಅನ್ನದಾತರ ಹೊಟ್ಟೆ ಮೇಲೆ ಬರೆ ಎಳೆದಿದೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.









