Kodagu | ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಿನಿ ನಯಾನರ ಫಾಲ್ಸ್
ಕೊಡಗಿನ ಪುಟ್ಟ ಜಲಾಶಯ ಚಿಕ್ಲಿಹೊಳೆಯ ಮನಮೋಹಕ ದೃಶ್ಯ ವೈಭವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಮಳೆಗಾಲದಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಮೈದುಂಬಿ ಹರಿಯುವ ಚಿಕ್ಲಿಹೊಳೆ ಜಲಾಶಯವನ್ನು ಮಿನಿ ನಯಾನರ ಫಾಲ್ಸ್ ಅಂತಾ ಕೂಡ ಕರೆಯುತ್ತಾರೆ.
ಈ ಜಲಾಶಯ ಬೇಸಿಗೆಯಲ್ಲಿ ಬರಡಾಗಿ ಕಾಣುತ್ತದೆ.

ಆದ್ರೆ ಕಳೆದ ಕೆಲವು ದಿನಗಳಿಂದ ಆರಂಭವಾಗಿರುವ ಮಳೆಯಿಂದ ಜಲಪಾತವೊಂದು ಸೃಷ್ಟಿಯಾಗಿದೆ.
ಅರ್ಧ ವೃತ್ತಾಕಾರದಲ್ಲಿ ಐದಾರು ಅಡಿಗಳ ಎತ್ತರದಿಂದ ಹಾಲ್ನೊರೆಯಂತೆ ದುಮ್ಮಿಕ್ಕುವ ಈ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದು.
ಹೀಗಾಗಿ ಈ ಜಲಾಶಯವನ್ನು ನೋಡಲು ಜನರ ದಂಡೇ ಹರಿದುಬರುತ್ತಿದೆ.
ಅಂದಹಾಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಸಮೀಪ ಈ ಜಲಾಶಯವಿದ್ದು, ಮಳೆಗಾಲದಲ್ಲಿ ಮಾತ್ರ ಜೀವಕಳೆ ಪಡೆದುಕೊಳ್ಳುತ್ತದೆ.








