C C Patil | ಕಾಂಗ್ರೆಸ್ ನವರಿಗೆ ಸಾವರ್ಕರ್ ಹೆಸರೇಳುವ ಯೋಗ್ಯತೆ ಇಲ್ಲ
ಬೆಳಗಾವಿ : ವೀರ ಸಾವರ್ಕರ್ ಹೆಸರು ಹೇಳುವುದಕ್ಕೆ ಕಾಂಗ್ರೆಸ್ ನವರಿಗೆ ಯೋಗ್ಯತೆ ಇಲ್ಲಾ. ಕಾಂಗ್ರೆಸ್ ನಾಲಿಗೆಯಲ್ಲಿ ಸಾವರ್ಕರ್ ಹೆಸರು ಬರಬಾರದು. ಆ ಯೋಗ್ಯತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದು ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ವೀರ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನರಿಗೆ ಹೋಲಿಕೆ ಮಾಡುತ್ತಾರೆ.
ವೀರ ಸಾವರ್ಕರ್ ಹೆಸರು ಹೇಳುವುದಕ್ಕೆ ಕಾಂಗ್ರೆಸ್ ನವರಿಗೆ ಯೋಗ್ಯತೆ ಇಲ್ಲಾ. ಕಾಂಗ್ರೆಸ್ ನಾಲಿಗೆಯಲ್ಲಿ ಸಾವರ್ಕರ್ ಹೆಸರು ಬರಬಾರದು. ಆ ಯೋಗ್ಯತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಅಧಿಕಾರಕ್ಕೆ ಬರಬೇಕು ಎಂದು ಇತಿಹಾಸ ಮಹಾಪುರುಷನ್ನೂ ಗೇಲಿ ಮಾಡುವುದು ಎಷ್ಟು ಸರಿ? ಕಾಂಗ್ರೆಸ್ ನವರಿಗೆ ಒಂದು ಧರ್ಮದ ರಾಜಕಾರಣ ಓಲೈಕೆ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ನನಗೆ ವೈಯಕ್ತಿಕವಾಗಿ ಗೌರವವಿದೆ ಎಂದರು.
ಅಭಿವೃದ್ಧಿ ಕಾರ್ಯಕ್ರಮಕ್ಕೆ ಅಥಣಿ ಶಾಸಕರು ಗೈರು ವಿಚಾರವಾಗಿ ಮಾತನಾಡಿದ ಸಿಸಿ ಪಾಟೀಲ್, ಅವರಿಗೆ ನ್ಯಾಯಾಲಯದಲ್ಲಿ ವಾರೆಂಟ್ ಇರುವುದರಿಂದ ಬೆಂಗಳೂರಿಗೆ ಹೋಗಿದ್ದಾರೆ. ನಾನು ದೂರವಾಣಿ ಮೂಲಕ ಸಂಪರ್ಕಿಸಿದ್ದೇನೆ. ಅವರು ಕಾರ್ಯಕ್ರಮದಲ್ಲಿ ಗೈರಾಗಿಲ್ಲ ಎಂದು ಸಮಜಾಯಿಷಿ ನೀಡಿದರು.








