ಕರ್ನಾಟಕದ ಸಿಎಂ ಬದಲಾವಣೆ ವಿಷಯ ಇತ್ತೀಚೆಗೆ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ರಾಜ್ಯ ಸಚಿವ ಮಧು ಬಂಗಾರಪ್ಪ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕ್ಯಾಬಿನೆಟ್ ಸಭೆಯಲ್ಲಿ ಕುರ್ಚಿ ಕದನ ಅಥವಾ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ, ಮಧು ಬಂಗಾರಪ್ಪ, ಕ್ಯಾಬಿನೆಟ್ನಲ್ಲಿ ರಾಜ್ಯದ ವಿಚಾರ ಚರ್ಚೆಯಾಗಿದೆಯಷ್ಟೇ. ಸಿಎಂ ಬದಲಾವಣೆ ಬಗ್ಗೆ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಅದನ್ನು ಹೈಕಮಾಂಡ್ಗೆ ಬಿಡಿ, ನೀವು ಯಾಕಯ್ಯ ಬಡಿದುಕೊಳ್ತೀರಾ? ಎಂದು ಮಾಧ್ಯಮಗಳ ವಿರುದ್ಧ ಗರಂ ಆದರು.
ರಾಜ್ಯದಲ್ಲಿ ಯಾರಾದರೂ ಹೈಕಮಾಂಡ್ ವಿಚಾರ ಮಾತಾಡ್ತಾರಾ? ಔಪಚಾರಿಕವಾಗಿ ಚರ್ಚೆ ಆಗಿಲ್ಲ, ಅದು ಮಾಡುವಂತದ್ದು ಅಲ್ಲ. ಕ್ಯಾಬಿನೆಟ್ನಲ್ಲಿ ಚರ್ಚೆ ಆಗಲ್ಲ, ನೀವು ಹಿಂಗೆಲ್ಲ ಪ್ರಶ್ನೆ ಕೇಳಬಾರದು ಎಂದು ಹೇಳಿದರು.
ಇನ್ನು, ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಒತ್ತಡ ಒಕ್ಕಲಿಗ ಮತ್ತು ಅಹಿಂದ ಸ್ವಾಮೀಜಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ವಿಷಯದ ಕುರಿತು ಮಾತನಾಡಲು ಮಧು ಬಂಗಾರಪ್ಪ ನಿರಾಕರಿಸಿದರು.
ಯಾರು ಏನೇ ಮಾಡಿದರೂ ಹೈಕಮಾಂಡ್ ನಾವು ಇತ್ಯರ್ಥ ಮಾಡ್ತೀವಿ ಅಂತ ದೊಡ್ಡವರು ಹೇಳಿರೋದ್ರಿಂದ, ನಾನು ಏನು ಹೇಳೋದಕ್ಕೆ ಹೋಗಲ್ಲ. ಹೈಕಮಾಂಡ್ ವಿಚಾರಗಳನ್ನ ನಾನು ಇಲ್ಲಿ ಹೇಳಲು ಬರುತ್ತಾ? ಅಥವಾ ಯಾರಾದರೂ ಇಲ್ಲಿ ತೀರ್ಮಾನ ಮಾಡೋಕೆ ಆಗುತ್ತಾ? ಈ ವಿಚಾರಕ್ಕೆ ನೀವು ಏನೇ ಮಾಡಿದರೂ ಡೆಲ್ಲಿಯವರು ಉತ್ತರ ಕೊಡ್ತಾರೆ, ನಾವು ಕೊಡೋದಿಲ್ಲ ಎಂದು ಮಾಧ್ಯಮಗಳ ಮೇಲೆ ಕೋಪ ವ್ಯಕ್ತಪಡಿಸಿದರು.








