ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ನುಡಿದ ಸಚಿವ ಮುನಿರತ್ನ
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು2023ರ ಒಳಗೆ ಕಾಂಗ್ರೆಸ್‌ನಿಂದಲೇ ಹೊರಹಾಕ್ತಾರೆ ಎಂದು ಸಚಿವ ಮುನಿರತ್ನ ಭವಿಷ್ಯ ನುಡಿದಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಾತನಾಡಿದ ಅವರು 2023ರ ಒಳಗೆ ಸಿದ್ದರಾಮಯ್ಯನನ್ನು ಕಾಂಗ್ರೆಸ್ ಪಕ್ಷದಿಂದಲೇ ಹೊರಹಾಕುತ್ತಾರೆ ನೋಡತಾ ಇರಿ. ರಾಮಕೃಷ್ಣ ಹೆಗಡೆ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ. 1994ರಲ್ಲಿ ಆಗಿದ್ದ ಘಟನೆ ಮತ್ತೆ 2023ಕ್ಕೆ ಆಗುತ್ತೆ ನೋಡಿ ಎಂದು ಹೊಸ ಬಾಂಬ್ ಸಿಡಸಿದ್ದಾರೆ.
ಇನ್ನೂ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿ ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ಕುರಿತು ವರಿಷ್ಠರು ನಿರ್ಧಾರ ಮಾಡುತ್ತಾರೆ. ನನಗೆ ಜವಬ್ದಾರಿ ವಹಿಸಿದರೆ ನಾನು ಇಂದೇ ಸುಮಲತಾ ಅವರನ್ನು ಪಕ್ಷಕ್ಕೆ ಕರೆತರುವ ಕೆಲಸ ಆರಂಭ ಮಾಡುತ್ತೇನೆ ಎಂದು ಹೇಳಿದರು.