ಕಲಬುರಗಿ: ವಿಶ್ವ ರಕ್ತದಿನದ ಅಂಗವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ರಕ್ತದಾನ ಮಾಡಿದರು.
ಕಲಬುರಗಿಯ ಜಿಲ್ಲಾಸ್ಪತ್ರೆ ಜಿಮ್ಸ್‍ನಲ್ಲಿ ಸಚಿವ ಸುಧಾಕರ್ ಜತೆ ಸಂಸದ ಡಾ.ಉಮೇಶ್ ಜಾಧವ್ ಕೂಡ ರಕ್ತದಾನ ಮಾಡಿದರು. ನಂತರ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿರ್ಮಿಸಿರುವ ಟ್ರಾಮಾ ಸೆಂಟರ್ ಪರಿಶೀಲನೆ ನಡೆಸಿದರು. ಟ್ರಾಮಾ ಸೆಂಟರ್‍ನ್ನು ಅಕ್ಟೋಬರ್‍ನಲ್ಲಿ ಉದ್ಘಾಟಿಸಲಾಗುವುದು. ಇದಕ್ಕೆ ಅಗತ್ಯವಿರುವ ಎಲ್ಲಾ ಕಾಮಗಾರಿಗಳನ್ನು ಮುಗಿಸಬೇಕು. ವೈದ್ಯಕೀಯ ಉಪಕರಣಗಳನ್ನು ತರಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಖಾಲಿಯಾಗಿರುವ ಪ್ರಾಧ್ಯಾಪರ ಹುದ್ದೆಗಳ ಭರ್ತಿಗೆ ತಕ್ಷಣವೇ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ಸಚಿವರು ಅಧಿಕಾರಿಗಳು ಸೂಚನೆ ನೀಡಿದರು.
ಕಾಂಗ್ರೆಸ್ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ: ವೋಟ್ ಬ್ಯಾಂಕ್ ಗಾಗಿ ದೇಶದ್ರೋಹಿಗಳಿಗೆ ಕಾಂಗ್ರೆಸ್ ರಕ್ಷಣೆ ಎಂದು ಛಲವಾದಿ ಆಕ್ರೋಶ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಗ್ಯುದ್ಧ ಈಗ ತಾರಕಕ್ಕೇರಿದ್ದು, ಪರಸ್ಪರ ವೈಯಕ್ತಿಕ ನಿಂದನೆ ಮತ್ತು ಗಂಭೀರ ಆರೋಪಗಳ ಸುರಿಮಳೆಯೇ ನಡೆಯುತ್ತಿದೆ. ಕೆಪಿಸಿಸಿ...








