ಬಾಲಕನಿಂದ ಚಿಕ್ಕಪ್ಪನ ಮಗಳ ಮೇಲೆ ಅತ್ಯಾಚಾರ : ಗರ್ಭಿಣಿಯಾದ ಅಪ್ರಾಪ್ತೆ..!
ದಾವಣಗೆರೆ: ಅಪ್ರಾಪ್ತ ಬಾಲಕನೋರ್ವ ತನ್ನ ಚಿಕ್ಕಪ್ಪನ ಅಪ್ರಾಪ್ತ ವಯಸ್ಸಿನ ಮಗಳ ( ತಂಗಿ) ಮೇಲೆ ಅತ್ಯಾಚಾರವೆಸಗಿದ್ದು, ಈಗ ಬಾಲಕಿಯು ಗರ್ಭಾವತಿ ಆಗಿರುವ ಘಟನೆ ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನಲ್ಲಿ ನಡೆದಿದೆ.
15 ವರ್ಷದ ಬಾಲಕಿ ಮೇಲೆ, ಅಪ್ರಾಪ್ತ ಬಾಲಕ ಅತ್ಯಾಚಾರ ಎಸಗಿದ್ದು, ಅತ್ಯಾಚಾರಕ್ಕೊಳಗಾಗಿರುವ ಬಾಲಕಿಯು ಇದೀಗ ಗರ್ಭಿಣಿಯಾಗಿದ್ದಾಳೆ. ತುಂಬು ಕುಟುಂಬದಲ್ಲಿ ಇವರಿಬ್ಬರು ವಾಸಗಿದ್ದರು. ಆದ್ರೆ ಚಿಕ್ಕಪ್ಪನ ಮಗನೇ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದು ಆಘಾತಕಾರಿ ಸಂಗತಿಯಾಗಿದೆ. ಸದ್ಯ ಸಂತ್ರಸ್ತ ಬಾಲಕಿಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಅಪ್ರಾಪ್ತ ಬಾಲಕನ ಮೇಲೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧಕ್ಕೆ ಒಪ್ಪಿಸಿದ್ದಾರೆ. ಆರೋಪಿ ಬಾಲಕನನ್ನ ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗುತ್ತದೆ ಎನ್ನಲಾಗಿದೆ.
ಮಹಿಳೆಯ ಸಾಮೂಹಿಕ ಅತ್ಯಾಚಾರ – ಕಾಂಗ್ರೆಸ್ ನಾಯಕ ಹಾಗೂ ಸ್ನೇಹಿತನ ವಿರುದ್ಧ ಕೇಸ್..!
ಮಹಿಳೆಯರನ್ನ ಟ್ರಾಪ್ ಮಾಡಿ ಅಶ್ಲೀಲ ವಿಡಿಯೋ ಸೆರೆ – ಪತಿ ವಿರುದ್ಧ ಆರೋಪ ಮಾಡಿದ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ..!
ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ : ಬಾಲಕಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ..!
ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ : 20 ವರ್ಷದ ಕಾಮುಕನಿಗೆ 20 ವರ್ಷ ಜೈಲು..!
ಇಬ್ಬರು ಕಾಮುಕರಿಂದ 14 ವರ್ಷದ ಬಾಲಕಿಯ ಅತ್ಯಾಚಾರ ಕೊಲೆ : ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ..!