ಇಬ್ಬರು ಕಾಮುಕರಿಂದ 14 ವರ್ಷದ ಬಾಲಕಿಯ ಅತ್ಯಾಚಾರ ಕೊಲೆ : ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ..!
ಆಗ್ರಾ : 14 ವರ್ಷದ ಬಾಲಕಿಯನ್ನ ಕಾಮುಕರು ಅತ್ಯಾಚಾರವೆಸಗಿ ಕೊಲೆ ಮಾಡಿ ಕೊಳಕ್ಕೆ ಎಸೆದಿರುವ ಹೇಯ ಕೃತ್ಯ ಉತ್ತರಪ್ರದೇಶದ ಆಗ್ರಾದಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಗ್ಯಾಂಗ್ ರೇಪ್ ಗಾಗಿ IPC ಸೆ. 376 –D, ಕೊಲೆ ಹಿನ್ನೆಲೆ ಸೆ. 302, ಸಾಕ್ಷಿ ನಾಶಕ್ಕಾಗಿ ಸೆ. 201ರ ಅಡಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳ ಪೈಕಿ ಓರ್ವ ಅಪ್ರಾಪ್ತನಾಗಿದ್ದಾನೆ.
ಓರ್ವ ಆರೋಪಿ 15 ವರ್ಷದವನಾಗಿದ್ರೆ ಮತ್ತೋರ್ವ 18 ವರ್ಷದವನಾಗಿದ್ದಾನೆ. ಬಾಲಕಿಯನ್ನ ಕಾಡಿನ ಪ್ರದೇಶಕ್ಕೆ ಎಳೆದೊಯ್ದಿರುವ ಕೀಚಕರು ಅಲ್ಲಿ ಅತ್ಯಾಚಾರವೆಸಗಿದ್ದಾರೆ. ಈ ವೇಳೆ ಉಸಿರುಗಟ್ಟಿ ಬಾಲಕಿ ಮೃತಪಟ್ಟಿದ್ದಾಳೆ. ಬಳಿಕ ಇಬ್ಬರೂ ಸೇರಿ ಆಕೆಯ ಮೃತದೇಹವನ್ನ ಬಟ್ಟೆಯಲ್ಲಿ ಸುತ್ತಿ ಕೊಳಕ್ಕೆ ಬಿಸಾಡಿದ್ದಾರೆ.
ಬಾಲಕಿ ತುಂಬ ಹೊತ್ತಾದ್ರೂ ಕಾಣಿಸದ ಹಿನ್ನೆಲೆ ಗಾಬರಿಗೊಂಡು ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಕುಟುಂಬದ ಓರ್ವ ಸದಸ್ಯರು ಕೊಳದಲ್ಲಿ ಬಾಲಕಿಯ ಮೃತದೇಹವನ್ನ ನೋಡಿದ್ದಾರೆ.
ಇದಾದ ಬಳಿಕ ಪೊಲೀಸರು ಬಾಲಕಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆ ಕಳುಹಿಸಿದ್ದರು. ವರದಿ ಬಂದ ವೇಳೆ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ.
ಬಳಿಕ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆಯುವಲ್ಗಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಪೈಕಿ ರಾಹುಲ್ ಎಂಬಾತ ಸಂತ್ರಸ್ತೆಯ ತಂದೆಯ ಬಳಿ ದಿನಗೂಲಿ ಕೆಲಸ ಮಾಡ್ತಿದ್ದ. ಮತ್ತೋರ್ವ 15 ವರ್ಷದ ಬಾಲಕ ಅದೇ ಗ್ರಾಮದವನಾಗಿದ್ದ ಎಂಬುದು ಗತೊತ್ತಾಗಿದೆ.
ಅಂದ್ಹಾಗೆ ಅಪರಾಧ ನಡೆದ ತಕ್ಷಣ ರಾಹುಲ್ ಕೆಲಸಕ್ಕೆ ಬರುವುದನ್ನ ನಿಲ್ಲಿಸಿಬಿಟ್ಟಿದ್ದ. ಇದರಿಂದ ಪೊಲೀಸರಿಗೆ ರಾಹುಲ್ ಮೇಲೆ ಅನುಮಾನ ಬಂದು ತನಿಖೆ ನಡೆಸಿದಾಗ ನಿಜಾಂಶ ಗೊತ್ತಾಗಿದೆ. ಬಾಲ ಆರೋಪಿಯನ್ನ ಪೋಕ್ಸೋ ನ್ಯಾಯಾಲದ ಎದುರು ಹಾಜರುಪಡಿಸಲಾಗಿದ್ದು, ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.
‘ಬಿಗ್ ಬಿ’ ಸಿನಿಮಾದಲ್ಲಿ ನಟಿಸೋಕೆ ರಶ್ಮಿಕಾ ಪಡೆದ ಸಂಭಾವನೆ ಕೇಳುದ್ರೆ ಸಾಕ್ ಆಗ್ತೀರಾ..!
BIGGBOSS : ಬಿಗ್ ಬಾಸ್ ಟ್ವಿಸ್ಟ್ ಗೆ ಸ್ಪರ್ಧಿಗಳು ಶಾಕ್ – ಮನೆಮಂದಿಯಲ್ಲಾ ಡೇಂಜರ್ ಝೋನ್ ನಲ್ಲಿ..!