BIGGBOSS : ಬಿಗ್ ಬಾಸ್ ಟ್ವಿಸ್ಟ್ ಗೆ ಸ್ಪರ್ಧಿಗಳು ಶಾಕ್  – ಮನೆಮಂದಿಯಲ್ಲಾ ಡೇಂಜರ್ ಝೋನ್ ನಲ್ಲಿ..!

1 min read

BIGGBOSS : ಬಿಗ್ ಬಾಸ್ ಟ್ವಿಸ್ಟ್ ಗೆ ಸ್ಪರ್ಧಿಗಳು ಶಾಕ್  – ಮನೆಮಂದಿಯಲ್ಲಾ ಡೇಂಜರ್ ಝೋನ್ ನಲ್ಲಿ..!

ಬಿಗ್ ಬಾಸ್ 8ನೇ ಆವೃತ್ತಿಯ 4ನೇ ವಾರ ಮನೆಯಲ್ಲಿ ಕ್ಯಾಪ್ಟನ್ ಅರವಿಂದ್ ಬಿಟ್ಟು ಉಳಿದ ಎಲ್ಲರೂ ಕೂಡ ಎಲಿಮೇಶನ್ ಗೆ ನಾಮಿನೇಟ್ ಆಗಿದ್ದಾರೆ. ಹೌದು ಕ್ಯಾಪ್ಟನ್ ಆಗಿರುವ ಕಾರಣ ಅರವಿಂದ್  ಈ ವಾರ ನಾಮಿನೇಟ್ ಆಗಿಲ್ಲ. ಆದ್ರೆ ಉಳಿದೆಲ್ಲಾ ಸ್ಪರ್ಧಿಗಳು ಕೂಡ ಡೇಂಜರ್ ಝೋನ್ ನಲ್ಲಿಯೇ ಇದ್ದಾರೆ.

ಮೊದಲನೇ ವಾರ ಬಿಗ್ ಬಾಸ್ ಮನೆಯಿಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಹೊರಗಡೆ ಹೋಗಿದ್ದರು. 2ನೇ ವಾರ ನಿರ್ಮಲಾ ಚೆನ್ನಪ್ಪ, 3ನೇ ವಾರ ಗೀತಾ ಭಾರತಿ ಭಟ್ ಹೊರನೆಡೆದಿದ್ದಾರೆ. ಈ ವಾರ ಯಾರು ಹೋಗ್ತಾರೆ ಅನ್ನೋ ಪ್ರಶ್ನೆಗಳು ಎದ್ದಿವೆ.

ಇನ್ನೂ ಮನೆಯಿಂದ ಹೊರಗಡೆ ಬಂದಿದ್ದ ಗೀತಾ ನನ್ನ ಬದಲಾಗಿ ಶಮಂತ್ ಹೋಗಬೇಕಿತ್ತು ಅಂತ ಕಿಚ್ಚನ ಬಳಿ ಹೇಳಿಕೊಂಡಿದ್ದರು. ಅಲ್ದೇ ಮುಂದಿನ ವಾರ ಬ್ರೋ ಗೌಡ ಅವರೇ ಎಲಿಮಿನೇಟ್ ಆಗೋದಾಗಿಯೂ ಭವಿಷ್ಯ ನುಡಿದಿದ್ದಾರೆ. ಆದ್ರೆ ಪ್ರೇಕ್ಷಕರು ಯಾರ ಪರ ವೋಟ್ ಮಾಡಿ ಯಾರನ್ನ ಉಳಿಸುತ್ತಾರೆ ಅನ್ನೋದು ಸವಾಲಾಗಿದೆ.

ಅಂದ್ಹಾಗೆ ಈ ವಾರ ಯಾವುದೇ ನಾಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ. ಬದಲಾಗಿ ಮನೆಯ ಎಲ್ಲ ಸದಸ್ಯರು ಕೂಡ ನೇರವಾಗಿಯೇ ನಾಮಿನೇಟ್ ಆದರು.  ಕ್ಯಾಪ್ಟನ್ ಅರವಿಂದ್ ಅವರನ್ನ ಬಿಟ್ಟು ಉಳಿದ ಎಲ್ಲರನ್ನೂ ಬಿಗ್ ಬಾಸ್ ನಾಮಿನೇಟ್ ಮಾಡಿದ್ದಾರೆ.

ಇನ್ನೂ ಆಟ ಟಫ್ ಆಗ್ತಿದೆ. ಈ  ಹಂತದಲ್ಲಿ ಮನೆಯಲ್ಲಿ ಉಳಿಯಬೇಕೆಂದರೆ ಪ್ರತಿ ಸದಸ್ಯರು ಉತ್ತಮವಾಗಿ ಆಟ ಆಡಲೇಬೇಕು. ಹೀಗಾಗಿ ಮನೆಯ ಎಲ್ಲಾ ಸದಸ್ಯರು ನೇರವಾಗಿ ನಾಮಿನೇಟ್ ಆಗಿದ್ದೀರಿ. ನಿಮ್ಮನ್ನು ನೀವು ಸಾಬೀತು ಮಾಡಿಕೊಳ್ಳಲು ಇದೊಂದು ಅವಕಾಶ  ಎಂದು ಬಿಗ್ ಬಾಸ್ ತಿಳಿಸಿದ್ದಾರೆ.

ಇದು ಬಿಗ್ ಬಾಸ್ ಸ್ಪರ್ಧಿಗಳಿಗೆ ದೊಡ್ಡ ಶಾಕ್ ಕೂಡ. ಯಾಕಂದ್ರೆ ಒಂದು ವೇಳೆ ಸಾಮಾನ್ಯ ನಾಮಿನೇಷನ್ ಪ್ರಕ್ರಿಯೆ ಜರರುಗಿದರೆ ಕೇವಲ 5-6 ಇಲ್ಲಾ 7 ಮಂದಿ ನಾಮಿನೇಟ್ ಆಗುತ್ತಿದ್ದರು. ಈಗ ಎಲ್ಲರೂ ಡೇಂಜರ್  ಝೋನ್ ನಲ್ಲೇ ಇದ್ದು, ಬಿಗ್ ಬಾಸ್ ಟ್ವಿಸ್ಟ್ ಗೆ ಮನೆ ಮಂದಿ ಪ್ಲಾನ್ ಗಳು ಟುಸ್ ಆಗಿದೆ.    ಈ ವಾರ ಒಟ್ಟು 13 ಮಂದಿ ನಾಮಿನೇಟ್ ಆಗಿದ್ದು, ಯಾರು ಮನೆಯಿಂದ ಆಚೆ ಬರಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ನಾಮಿನೇಟ್ ಆಗಿರುವ ಸ್ಪರ್ಧಿಗಳು

ಶಮಂತ್ ಗೌಡ

ಪ್ರಶಾಂತ್

ದಿವ್ಯಾ ಸುರೇಶ್

ರಾಜೀವ್

ನಿಧಿ

ರಘು

ದಿವ್ಯಾ ಉರುಡುಗ

ವಿಶ್ವ

ಚಂದ್ರಕಲಾ

ಮಂಜು

ಶುಭಾ

ಶಂಕರ್

ವೈಷ್ಣವಿ

BIGGBOSS 8 : ನಮ್ಮಿಬ್ಬರ ಮಧ್ಯೆ ಸ್ಪಾರ್ಕ್ ಇದೆ ಅಂತ ಒಪ್ಪಿಕೊಂಡ ದಿವ್ಯಾ..!    

‘ರಾಬರ್ಟ್’ , ‘ಪೊಗರು’ ರೆಕಾರ್ಡ್ ಬ್ರೇಕ್ ಮಾಡುತ್ತಾ ‘ಯುವರತ್ನ’..!

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd