BIGGBOSS 8 : ನಮ್ಮಿಬ್ಬರ ಮಧ್ಯೆ ಸ್ಪಾರ್ಕ್ ಇದೆ ಅಂತ ಒಪ್ಪಿಕೊಂಡ ದಿವ್ಯಾ..!    

1 min read

BIGGBOSS 8 : ನಮ್ಮಿಬ್ಬರ ಮಧ್ಯೆ ಸ್ಪಾರ್ಕ್ ಇದೆ ಅಂತ ಒಪ್ಪಿಕೊಂಡ ದಿವ್ಯಾ..!

ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಟ್ರಯಾಂಗಲ್ ಸ್ಟೋರಿ ಗಮನ ಸೆಳೆದಿತ್ತು. ಶಮಂತ್, ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ  ನಡುವಿನ ತ್ರಿಕೋನ ಪ್ರೇಮ್ ಕಹಾನಿ ಸಿಕ್ಕಾಪಟ್ಟೆ ಚರ್ಚೆಗೆ ಬಂದಿತ್ತು.

ಆದ್ರೆ ಈಗ  ಒಂದು 5-6 ದಿನಗಳಿಂದ ಹೆಚ್ಚಾಗಿ ಚರ್ಚೆಯಾಗುತ್ತಿರುವ ಜೋಡಿ ಅಂದ್ರೆ ಅದು ದಿವ್ಯಾ ಉರುಡುಗ ಹಾಗೂ ಬೈಕ್ ರೇಸರ್ ರಾಜೀವ್ ಅವರದ್ದು. ಹೌದು ಇವರಿಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಅನ್ನೋದು ಮನೆವರ ವಾದ.

ಅದಕ್ಕೆ ಕಾರಣವೂ ಇದೆ. ಜೋಡಿ ಟಾಸ್ಕ್ ನಲ್ಲಿ ಅರವಿಂದ್ ದಿವ್ಯಾ ಉರುಡುಗ ಒಟ್ಟಾಗಿ ಆಡಿ ಗೆದ್ದ ನಂತರ ಇಬ್ಬರೂ ಒಟ್ಟಾಗಿಯೇ ಕಾಣಿಸಿಕೊಳ್ತಿದ್ದಾರೆ. ಸದಾ ಜೊತೆಯಲ್ಲಿಯೇ ಇರುತ್ತಾರೆ. ಈ ವಿಚಾರವಾಗಿ ಕಿಚ್ಚ ಸುದೀಪ್ ಅವರು ಸಹ ವಾರದ ಕಥೆ ಸಂಚಿಕೆಯಲ್ಲಿ ಮಾತನಾಡಿದ್ದರು.ಈ ವೇಳೆ ಮನೆಮಂದಿಯೆಲ್ಲಾ ಸೇರಿ ದಿವ್ಯಾ ಹಾಗೂ ಅರವಿಂದ್ ಕಾಲೆಳೆದಿದ್ದರು. ಆದ್ರೆ ಅಂತಹದ್ದೇನು ಇಲ್ಲ ಅಂತ ದಿವ್ಯಾ ಹೇಳಿಕೊಂಡಿದ್ದರು.

ಇದೀಗ ಈ ವಿಚಾರವಾಗಿ  ದಿವ್ಯಾ ಮಾತನಾಡಿದ್ದಾರೆ. ರಾಜೀವ್ ಜೊತೆ ಮಾತನಾಡುತ್ತಿದ್ದ ದಿವ್ಯಾ, ತಮ್ಮ ಮತ್ತು ಅರವಿಂದ್ ನಡುವೆ ಇರೋ ಸಂಬಂಧದ ಬಗ್ಗೆ ಗೊಂದಲದ ಹೇಳಿಕೆ ನೀಡಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ರಾಜೀವ್ ಮತ್ತು ದಿವ್ಯಾ ಅಕ್ಕಪಕ್ಕ ಕುಳಿತಿದ್ದಾಗ ಈ ಬಗ್ಗೆ ದಿವ್ಯಾ ಉರುಡುಗ ಮಾತನಾಡಿ ಅರವಿಂದ್ ಹಾಗೂ ನನ್ನ ನಡುವೆ ಒಂದು ವೈಬ್, ಒಂದು ಸ್ಪಾರ್ಕ್ ಇದೆ ಅಷ್ಟೇ. ಅದಕ್ಕಿಂತ ಹೆಚ್ಚಿನದು ಏನೂ ಇಲ್ಲ ಎಂದಿದ್ದಾರೆ.

ಜೋಡಿ ಟಾಸ್ಕ್ ನಲ್ಲಿ ಜೊತೆಯಾದಗಲೂ ಟಾಸ್ಕ್ ಬಗ್ಗೆ ಹೆಚ್ಚು ಮಾತನಾಡಿದ್ದೇವೆಯೇ ಹೊರತು ಬೇರೆ ಏನೂ ಇಲ್ಲ ಎಂದು ದಿವ್ಯಾ ಹೇಳಿದ್ದಾರೆ. ಈ ವೇಳೆ ರಾಜೀವ್ ದಿವ್ಯಾರಿಗೆ ಸಲಹೆ ನೀಡಿದ್ದು, ಇಲ್ಲದೇ ಇರೋದನ್ನ ಇದೆ ಅನ್ನೋ ರೀತಿ ಬಿಂಬಿಸೋಕೆ ಹೋಗಬೇಡಿ ಎಂದಿದ್ದಾರೆ.

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕಂಗನಾ ರಣಾವತ್ ಅತ್ಯುತ್ತಮ ನಟಿ, ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಸಾಹಸ ನಿರ್ದೇಶನ ಪ್ರಶಸ್ತಿ

ಹಿರಿಯ ನಟ ಜಿತೇಂದ್ರ ಬಿಳಿ ಬಟ್ಟೆಗಳನ್ನೇ ಏಕೆ ಧರಿಸುತ್ತಾರೆ? ಇದರ ಹಿಂದಿದೆ ಬಹಳ ಕುತೂಹಲಕಾರಿ ಕಾರಣ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd