‘ರಾಬರ್ಟ್’ , ‘ಪೊಗರು’ ರೆಕಾರ್ಡ್ ಬ್ರೇಕ್ ಮಾಡುತ್ತಾ ‘ಯುವರತ್ನ’..!
ಕೊರೊನಾ ನಡುವೆ ಸಂಪೂರ್ಣ ನೆಲಕಚ್ಚಿದ್ದ ಥಿಯೇಟರ್ ಗಳು ಪುನರಾರಂಭವಾದ್ರೂ ಕೂಡ ಕೆಲ ತಿಂಗಳು ರಂಗು ಕಳೆದುಕೊಂಡಿತ್ತು. 50 % ಸೀಟಿಂಗ್ ಮಧ್ಯೆ ಸ್ಟಾರ್ ಸಿನಿಮಾಗಳಿಲ್ಲದೇ ಬಿಕೋ ಎನ್ನುತ್ತಿದ್ದ ಥಿಯೇಟರ್ ಗಳು ಮರು ಜೀವ ಪಡೆದುಕೊಂಡಿದ್ದು, ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈವೋಲ್ಟೇಜ್ ಸಿನಿಮಾ ಪೊಗರು ರಿಲೀಸ್ ಆದಮೇಲೆ.
ಪೊಗರು ಸಿನಿಮಾ ತಮಿಳು, ತೆಲುಗು ,ಕನ್ನಡದಲ್ಲಿ ಅಬ್ಬರಿಸಿತು. ಇನ್ನೂವರೆಗೂ ಥಿಯೇಟರ್ ಗಳಲ್ಲಿ ಓಡುತ್ತಿದೆ. ಸಿನಿಮಾ ಮೇಲಿನ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಬಾಕ್ಸ ಆಫೀಸ್ ಕೊಳ್ಳೆ ಹೊಡೆದು ಭರ್ಜರಿ ದುಡ್ಡು ಮಾಡಿದೆ.
ಆದ್ರೆ ಆರಂಭದಲ್ಲಿದ್ದ ಅಬ್ಬರ ಈಗಿಲ್ಲ. ಯಾಕೆ ಅಂತ ಎಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಕಾರಣ ರಾಬರ್ಟ್… ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇದೇ ತಿಂಗಳು ಅಂದ್ರೆ ಮಾರ್ಚ್ 11 ಕ್ಕೆ ರಿಲೀಸ್ ಆಯ್ತು.
ರಿಲೀಸ್ ಆಗಿ ಒಂದೇ ವಾರಕ್ಕೆ ಕೋಟಿ ಕೋಟಿ ಬಾಚಿತು. ಹೀಗೆ ರಾಬರ್ಟ್ ಅಬ್ಬರದ ನಡುವೆ ಪೊಗರು ಹವಾ ಕೊಂಚ ಕಡಿಮೆಯಾಗಿದೆ. ಪೊಗರು ಸಿನಿಮಾಗೆ ಥಿಯೇಟರ್ ಗಳ ಸಂಖ್ಯೆ ಕಡಿಮೆಯಾಗಿದೆ. ಪೊಗರು ಫೆಬ್ರವರಿಗೆ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ ಭರ್ಜರಿ ಕಲೆಕ್ಷನ್ ಗಳಿಸಿತು. ನಂತರ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅವರ ರಾಬರ್ಟ್ ಸಿನಿಮಾವೂ 70 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಆದ್ರೆ ಪೊಗರು ಹಾಗೂ ರಾಬರ್ಟ್ ಸಿನಿಮಾಗಳ ಹವಾ ಏಪ್ರಿಲ್ 1 ರ ನಂತರ ಸಂಪೂರ್ಣವಾಗಿ ಕಡಿಮೆಯಾಗಲಿದೆ. ಯಾಕಂದ್ರೆ ಏ.1ಕ್ಕೆ ಮತ್ತೊಬ್ಬ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ತೆರೆ ಮೇಲೆ ಅಬ್ಬರಿಸಲಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಯುವರತ್ನ ತೆರೆಕಾಣಲಿದ್ದು, ಬಹುತೇಕ ಎಲ್ಲಾ ಥಿಯೇಟರ್ ಗಳಲ್ಲಿ ಯುರತ್ನನೇ ಅಬ್ಬರಿಸಲಿರೋದ್ರಲ್ಲಿ ನೋಡ ಡೌಟ್..
ಈ ಸಿನಿಮಾವೂ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಗಳನ್ನ ಬ್ರೇಕ್ ಮಾಡಲಿದೆ. ರಾಬರ್ಟ್ ಹಾಗೂ ಪೊಗರು ದಾಖಲೆಗಳನ್ನ ಬ್ರೇಕ್ ಮಾಡಲಿದೆ ಅನ್ನೋದು ಸಿನಿಮಾ ವಿಮರ್ಶಕರ ಅಭಿಪ್ರಾಯ. ಇನ್ನೂ ಈ ಸಿನಿಮಾ ಫ್ಯಾಮಿಲಿ ಎಂಟರ್ಟೈನ್ ಮೆಂಟ್ ಕಥೆ ಹೊಂದಿರುವುದು ಟೀಸರ್ ನಿಂದಲೇ ಗೊತ್ತಾಗ್ತಿದ್ದು, 100 ದಿನ ಓಡೋದು ಪಕ್ಕಾ ಎಂದೇ ಹೇಳಲಾಗ್ತಿದೆ.
ಟೀಸರ್ ನಲ್ಲಿ ಅಪ್ಪು ಲುಕ್ಸ್, ಮಾಸ್ ಎಂಟ್ರಿ, ಡೈಲಾಗ್ಸ್, ಡ್ಯಾನ್ಸ್, ಆಕ್ಷನ್ ಗೆ ಫಿದಾ ಆಗಿರುವ ಅಭಿಮಾನಿಗಳು ಸಿನಿಮಾ ರಿಲೀಸ್ ಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲೂ ದಾಖಲೆ ಮಾಡಿದ್ದು, ಸಿನಿಮಾ ರಿಲೀಸ್ ಆಗಿ ಹಿಂದಿನ ಸಿನಿಮಾಗಳ ದಾಖಲೆಗಳ ಮುರಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.