ಯುಪಿ : 17 ವರ್ಷದ ಬಾಲಕಿಯನ್ನು ಅಪಹರಿಸಿ, 3 ತಿಂಗಳು ಅತ್ಯಾಚಾರವೆಸಗಿದ ತಾಂತ್ರಿಕ
ತಾಂತ್ರಿಕನೊಬ್ಬ 17 ವರ್ಷದ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ನಿರಂತರವಾಗಿ 3 ತಿಂಗಳುಗಳ ಕಾಲ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದ ಬಲಿಯಾದಲ್ಲಿ ನಡೆದಿದೆ. ಸಂತ್ರಸ್ತೆ ತಂದೆ ಮಿಸ್ಸಿಂಗ್ ಕೇಸ್ ದಾಖಲಿಸಿದ ನಂತರ ತನಿಖೆ ಕೈಗೆತ್ತುಕೊಂಡಿದ್ದ ಪೊಲೀಸರು ಇದೀಗ ಆರೋಪಿ ಬಾಬಾನನ್ನ ಬಂಧಿಸಿ ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಜೋಗ್ ಬಾಬಾ (23) ಎಂಬ ಆರೋಪಿಯನ್ನು ರೈಲ್ವೇ ನಿಲ್ದಾಣದಿಂದ ಬಂಧಿಸಲಾಗಿದೆ ಮತ್ತು ಆತನ ಜೊತೆಯಲ್ಲಿದ್ದ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ. ರೇವತಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯ ನಿವಾಸಿಯಾಗಿರುವ ಬಾಲಕಿಯನ್ನು ಜೂನ್ ನಲ್ಲಿ ಅಪಹರಿಸಲಾಗಿತ್ತು ಎಂದು ಹಿರಿಯ ಸಬ್ ಇನ್ಸ್ ಪೆಕ್ಟರ್ ಅಜಯ್ ಯಾದವ್ ತಿಳಿಸಿದ್ದಾರೆ.
ಸಂತ್ರಸ್ತೆಯು ತನ್ನ ಚಿಕಿತ್ಸೆಗಾಗಿ ತಾಂತ್ರಿಕನನ್ನ ಭೇಟಿಯಾದಂತ ಸಂದರ್ಭದಲ್ಲಿ ಆಕೆಗೆ ಮದುವೆಯಾಗುವುದಾಗಿ ನಂಬಿಸಿ ಬಳಿಕ ಆಕೆಯನ್ನ ಅಪಹರಿಸಿ ದೆಹಲಿ ಮತ್ತು ಕೋಟಾಗೆ ಕರೆದೊಯ್ದು, ಸುಮಾರು ಮೂರು ತಿಂಗಳ ಕಾಲ ಆಕೆಯ ಮೇಲೆ ಅತ್ಯಾಚಾರವೆಸಗಿರೋದಾಗಿ ಬಾಲಕಿಯುವ ಆರೋಪ ಮಾಡಿರೋದಾಗಿ ತಿಳಿದುಬಂದಿದೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಕೆಯ ತಂದೆ ಜೂನ್ 30 ರಂದು ಆರೋಪಿಗಳ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು. ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ ವಿಭಾಗಗಳು ಮತ್ತು ಪೋಕ್ಸೊ ಕಾಯಿದೆಯ ಪ್ರಕರಣಗಳನ್ನು ದಾಖಲಿಸಿ ವಿಚಾರಣೆ ಮುಂದುವರೆಸಿದ್ದಾರೆ.