ಜೈಪುರ: ರೈಲ್ವೆ ಹಳಿಯ (Railway Track) ಮೇಲೆ ಕಲ್ಲು, ರಾಡ್ ಗಳನ್ನು ಇಟ್ಟು ದುಷ್ಕರ್ಮಿಗಳು ಸಂಚಾರಕ್ಕೆ ಅಡ್ಡಿ ಮಾಡಿರುವ ಘಟನೆ ನಡೆದಿದೆ.
ಕೂಡಲೇ ಎಚ್ಚೆತ್ತುಕೊಂಡ ವಂದೇ ಭಾರತ್ ರೈಲಿನ ಪೈಲಟ್ ಗಳು ತುರ್ತಾಗಿ ರೈಲನ್ನು ನಿಲ್ಲಿಸಿ, ಅನಾಹುತ ತಪ್ಪಿಸಿದ್ದಾರೆ. ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಉದಯಪುರದಿಂದ ಜೈಪುರಕ್ಕೆ ವಂದೇ ಭಾರತ್ ರೈಲು ಚಲಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ದೊಡ್ಡ ಅಪಘಾತವನ್ನು ತಡೆಯಲು ಪೈಲಟ್‌ಗಳು ತಕ್ಷಣವೇ ರೈಲನ್ನು ನಿಲ್ಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ರೈಲ್ವೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.