ವಿಶ್ವ ಸುಂದರಿ 2021: ರನ್ನರ್ ಅಪ್ ಆದ ಭಾರತೀಯ ಮೂಲದ ಅಮೆರಿಕನ್ ಶ್ರೀ ಸೈನಿ
ವಿಶ್ವ ಸುಂದರಿ 2021 ಕಾರ್ಯಕ್ರಮದಲ್ಲಿ ಯುಎಸ್ ಮೂಲದ ಭಾರತೀಯ-ಅಮೆರಿಕನ್ ಶ್ರೀ ಸೈನಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬ ಭಾರತೀಯರೂ ಇದು ಹೆಮ್ಮೆ ಪಡುವಂತಹ ಕ್ಷಣವನ್ನ ಸೃಷ್ಟಿಸಿದ್ದಾರೆ.
ಪೋರ್ಟೊ ರಿಕೊದ ಕೋಕಾ-ಕೋಲಾ ಮ್ಯೂಸಿಕ್ ಹಾಲ್ನಲ್ಲಿ ಮಾರ್ಚ್ 16 ರಂದು ನಡೆದ ಪ್ರತಿಷ್ಠಿತ ಸಮಾರಂಭದಲ್ಲಿ ಸೈನಿ ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರತಿನಿಧಿಸುತ್ತಿದ್ದರು. ವಿಶ್ವ ಸುಂದರಿಯನ್ನ ಹುಡುಕಲು ಸೌಂದರ್ಯ ಖಣಿಗಳ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿತ್ತು. ಈ ಸ್ಪರ್ಧೆಯಲ್ಲಿ ಪೋಲೆಂಡ್ನ ಕರೋಲಿನಾ ಬಿವ್ಲೆಸ್ಕಾ ಅವರು 70 ನೇ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು.
ಕೋಟ್ ಡಿ ಐವೊರ್ ದೇಶದ ಒಲಿವಿಯಾ ಯೇಸ್ ಅವರನ್ನು ಮಿಸ್ ವರ್ಲ್ಡ್ 2021 ರಲ್ಲಿ ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಗಿದೆ. ಮಿಸ್ ವರ್ಲ್ಡ್ ಅಧಿಕೃತ ಪುಟದಲ್ಲಿ ಮಿಸ್ ವರ್ಲ್ಡ್ ಮತ್ತು ಮೊದಲ ಮತ್ತು ಎರಡನೇ ರನ್ನರ್ ಅಪ್ಗಳ ಪೋಟೋದೊಂದಿಗೆ ಸುದ್ದಿಯನ್ನ ಪ್ರಕಟಮಾಡಲಾಗಿದೆ. ಶ್ರೀ ಸೈನಿ ಅವರು ಮಿಸ್ ವರ್ಲ್ಡ್ ಅಮೇರಿಕಾ 2021 ಕಿರೀಟವನ್ನು ಗೆದ್ದ ಮೊದಲ ಭಾರತೀಯ-ಅಮೆರಿಕನ್ ಯುವತಿಯಾಗಿದ್ದಾರೆ. ಜೊತೆಗೆ ಬ್ಯೂಟಿ ವಿತ್ ಎ ಪರ್ಪಸ್ ಸ್ಪರ್ಧೆಯಲ್ಲಿ ಅಮೆರಿಕಾವನ್ನ ಪ್ರತಿನಿಧಿಸಿದ್ದರು.
Our newly crowned Miss World Karolina Bielawska from Poland with 1st Runner Up Shree Saini from United States 2nd Runner up Olivia Yace from Côte d’Ivoire#missworld pic.twitter.com/FFskxtk0KO
— Miss World (@MissWorldLtd) March 17, 2022
ಮಿಸ್ ವರ್ಲ್ಡ್ ರನ್ನರ್ ಆಪ್ ಕಿರೀಟ ಧರಿಸಿರುವ ಚಿತ್ರವನ್ನು ಹಂಚಿಕೊಂಡಿರುವ ಶ್ರೀ ಸೈನಿ ಸ್ಪರ್ದೆ ತಯಾರಿ ಶುರುವಾದ ಕುರಿತು ಬರೆದುಕೊಂಡಿದ್ದಾರೆ. ನಾನು ಕೇವಲ 6 ವರ್ಷದಳಿದ್ದಾಗ “ಮಿಸ್ ವರ್ಲ್ಡ್ ಪ್ರಾರಂಭವಾಯಿತು! ನಾನು ವಿಶ್ವ ಸುಂದರಿ ವೇಷ ಧರಿಸಿದ್ದೆ, ಏಕೆಂದರೆ ನಾನು ವಿಶ್ವ ಸುಂದರಿಯನ್ನು ಸೂಪರ್ಹೀರೋ ಎನ್ನುವಂತೆ ನೋಡ್ತಿದ್ದೆ. ಇದು ಚಿಕ್ಕಂದಿನಿಂದಲೂ ನನ್ನ ಆಳವಾದ ಆಸೆ. ಎಲ್ಲರೂ ದಯವಿಟ್ಟು ಪ್ರಾರ್ಥಿಸಿ. ತುಂಬಾ ಧನ್ಯವಾದಗಳು”. ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.
Indo-American Shree Saini from US is Miss World 2021 1st runner-up








