ಕಾರವಾರ: ನಾಪತ್ತೆಯಾಗಿದ್ದ ಜಪಾನ್ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಗೋಕರ್ಣ ಪೊಲೀಸರ ತಂಡ ಯಶಸ್ವಿಯಾಗಿದೆ.
ಗೋಕರ್ಣದಲ್ಲಿ ನಾಪತ್ತೆಯಾಗಿದ್ದ ಜಪಾನ್ ಮಹಿಳೆಯನ್ನು ಪೊಲೀಸರು ಕೇರಳದಲ್ಲಿ ಪತ್ತೆ ಮಾಡಿದ್ದಾರೆ. ಜಪಾನ್ ಮಹಿಳೆಯು
ಫೆ. 5 ರಂದು ಗೋಕರ್ಣ ನೇಚರ್ ಕಾಟೇಜ್ ನಿಂದ ನಾಪತ್ತೆಯಾಗಿದ್ದು, ಈ ಕುರಿತು ಅವರ ಪತಿ ದೈ ಯಮಾಝಕಿ ಠಾಣೆಯಲ್ಲಿ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು, ಯಮಾಝಕಿ ಆನ್ ಲೈನ್ ನಲ್ಲಿ ಇರುವ ಕುರಿತು ಪತ್ತೆ ಮಾಡಿ ಕೇರಳದಿಂದ ಕರೆ ತರುತ್ತಿದ್ದಾರೆ.
ಫೆ.4 ರಂದು ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕಾಟೇಜ್‌ನಲ್ಲಿ ತನ್ನ ಪತಿಯ ಜತೆ ಇದ್ದ ಮಹಿಳೆಯು ಪತಿಯೊಂದಿಗೆ ಯಾವುದೋ ವಿಷಯಕ್ಕೆ ಗಲಾಟೆ ಮಾಡಿಕೊಂಡಿದ್ದಳು. ಪತಿಯ ಮೇಲಿನ ಸಿಟ್ಟಿನಿಂದ ಬೆಳಿಗ್ಗೆ ಎದ್ದು ಹೋದ ಮಹಿಳೆ ಗೋಕರ್ಣದ ರೈಲ್ವೆ ನಿಲ್ದಾಣಕ್ಕೆ ತೆರಳಿ ಹಿಂದೆ ಭೇಟಿ ನೀಡಿದ್ದ ಕೇರಳಕ್ಕೆ ತೆರಳಿದ್ದರು. ಆದರೆ, ಆನ್ ಲೈನ್ ನಲ್ಲಿ ಸಕ್ರಿಯವಾಗಿದ್ದರು. ಸದ್ಯ ಪತ್ತೆ ಹಚ್ಚಿ ಪೊಲೀಸರು ಕರೆ ತರುತ್ತಿದ್ದಾರೆ.