ಶ್ರೀಲಂಕಾ ಜೊತೆಗೆ ಏಕದಿನ ಸರಣಿ : ಆಸ್ಟ್ರೇಲಿಯಾಗೆ ಭಾರಿ ಶಾಕ್..
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾ ಭಾರೀ ಆಘಾತ ಎದುರಿಸುವ ಸಾಧ್ಯತೆ ಇದೆ.
ತಂಡದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯಿಂದಾಗಿ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.
ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ಮಾರ್ಷ್ ಬೆನ್ನು ನೋವಿನಿಂದ ಬಳಲುತ್ತಿದ್ದರು.
ಇದರಿಂದಾಗಿ ಪಲ್ಲೆಕೆಲೆಯಲ್ಲಿ ನಡೆದ ಮೂರನೇ ಟಿ20 ಪಂದ್ಯದಿಂದ ಮಾರ್ಷ್ ಗೆ ರೆಸ್ಟ್ ನೀಡಲಾಗಿತ್ತು.
ಆದಾಗ್ಯೂ, ಮಾರ್ಷ್ ಗಾಯದಿಂದ ಚೇತರಿಸಿಕೊಳ್ಳಲು ಸುಮಾರು ಎರಡು ವಾರ ಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಐದು ಪಂದ್ಯಗಳ ಏಕದಿನ ಸರಣಿಯ ಭಾಗವಾಗಿ ಜನವರಿ 14 ರಂದು ಪಲ್ಲೆಕೆಲೆಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಏತನ್ಮಧ್ಯೆ, ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಸ್ಟ್ರೇಲಿಯಾ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಆಸ್ಟ್ರೇಲಿಯಾ ಏಕದಿನ ತಂಡ: ಆರನ್ ಫಿಂಚ್ (ನಾಯಕ), ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಬುಶೆನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ವಾರ್ನರ್
mitchell-marsh-unlikely-take-part-odi-series