ಮಿಥಾಲಿ ದಿಟ್ಟ ಹೋರಾಟ… ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ ಗೆಲುವು

1 min read
mithali raj team india saakshatv

ಮಿಥಾಲಿ ದಿಟ್ಟ ಹೋರಾಟ… ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ ಗೆಲುವು

mithali raj saakshatv team indiaಕೊನೆಗೂ ಭಾರತ ಮಹಿಳಾ ಕ್ರಿಕೆಟ್ ತಂಡ ಕ್ಲೀನ್ ಸ್ವೀಪ್ ಅವಮಾನವನ್ನು ತಪ್ಪಿಸಿಕೊಂಡಿತ್ತು. ನಾಯಕಿ ಮಿಥಾಲಿ ರಾಜ್ ಅವರ ಜವಾಬ್ದಾರಿಯುತ ಆಟದಿಂದಾಗಿ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ನಾಲ್ಕು ವಿಕೆಟ್ ಗಳಿಂದ ಪರಾಭವಗೊಳಿಸಿತು,
ಗೆಲ್ಲಲು 220 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಭಾರತ ಮಹಿಳಾ ತಂಡ 46.3 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅಜೇಯ 75 ರನ್ ದಾಖಲಿಸಿದ್ರು. ಮಿಥಾಲಿ ರಾಜ್ 86 ಎಸೆತಗಳಲ್ಲಿ ಎಂಟು ಬೌಂಡರಿಗಳನ್ನು ಸಿಡಿಸಿದ್ರು.
ಇನ್ನೊಂದೆಡೆ ಆರಂಭಿಕ ಆಟಗಾರ್ತಿ ಸ್ಮøತಿ ಮಂದಾನ ಆಕರ್ಷಕ 49 ರನ್ ಗಳಿಸಿದ್ರೆ, ಶಫಾಲಿ ವರ್ಮಾ 19 ರನ್, ಜೆಮಿಮಾ ರೋಡ್ರಿಗಸ್ 4 ರನ್, ಹರ್ಮಾನ್ ಪ್ರೀತ್ ಕೌರ್ 16 ರನ್ ಮತ್ತು ದೀಪ್ತಿ ಶರ್ಮಾ 18 ರನ್ ಗಳಿಸಿದ್ರೆ, ಸ್ನೇಹಾ ರಾಣಾ ಬಿರುಸಿನ 22 ರನ್ ಗಳಿಸಿ ಮಿಥಾಲಿ ರಾಜ್ ಅವರಿಗೆ ಉತ್ತಮ ಸಾಥ್ ನೀಡಿದ್ರು.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 47 ಓವರ್ ಗಳಲ್ಲಿ 219 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು,
ಇಂಗ್ಲೆಂಡ್ ತಂಡದ ಪರ ಲಾರೇನ್ ವಿನೆಫೆಲ್ಡ್ 36 ರನ್, ನಾಯಕಿ ಹಿಥರ್ ನೈಟ್ 46, ನಟಾಲಿ ಸ್ಕಿವೆರ್ 49 ರನ್, ಸೋಫಿಯಾ ಡಂಕ್ಲೆ 28 ರನ್ ದಾಖಲಿಸಿದ್ರು. ಭಾರತದ ಪರ ದೀಪ್ತಿ ಶರ್ಮಾ 47ಕ್ಕೆ ಮೂರು ವಿಕೆಟ್ ಉರುಳಿಸಿದ್ರು.
ಆಕರ್ಷಕ ಬ್ಯಾಟಿಂಗ್ ನಡೆಸಿದ್ದ ಮಿಥಾಲಿ ರಾಜ್ ಪಂದ್ಯ ಶ್ರೇಷ್ಠ ಪಡೆದ್ರು. ಇಂಗ್ಲೆಂಡ್ ನ ಸೋಫಿ ಎಕ್ಲೆಸ್ಟೊನ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd