100% ಸ್ವದೇಶಿ ನಿರ್ಮಿತ Mivi ಸೌಂಡ್ ಬಾರ್ಸ್ ಭಾರತದಲ್ಲಿ ಬಿಡುಗಡೆ

1 min read

100% ಸ್ವದೇಶಿ ನಿರ್ಮಿತ Mivi ಸೌಂಡ್ ಬಾರ್ಸ್ ಭಾರತದಲ್ಲಿ ಬಿಡುಗಡೆ

ಸ್ವದೇಶಿ ಕಂಪನಿಯಾದ  Mivi ಮುಂದಿನ ವಾರ Mivi Fort S60 ಮತ್ತು S100 ಹೆಸರಿನ ಎರಡು ಹೊಸ ಸೌಂಡ್‌ಬಾರ್‌ ಸ್ಪೀಕರ್ ಗಳನ್ನ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಮೂಲಕ ತನ್ನ ಸೌಂಡ್‌ಬಾರ್ ಪೋರ್ಟ್‌ಫೋಲಿಯೊವನ್ನ ಕಂಪನಿ ವಿಸ್ತರಿಸಿಕೊಂಡಿದೆ.  ಎರಡೂ ಸೌಂಡ್‌ಬಾರ್‌ಗಳು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಸೌಂಡ್‌ಬಾರ್‌ಗಳು ಎಂದು Mivi ಹೇಳಿಕೊಂಡಿದೆ. ಎರಡೂ ಸೌಂಡ್‌ಬಾರ್‌ಗಳೊಂದಿಗೆ ಭಾರೀ ಬಾಸ್ ಕ್ವಾಲಿಟಿಯನ್ನ ಕಂಪನಿ ಕ್ಲೈಮ್ ಮಾಡಿದೆ.

ವಿನ್ಯಾಸದಿಂದ ಹಿಡಿದು ಈ ಸೌಂಡ್‌ಬಾರ್‌ಗಳ ವರೆಗೆ ಎಲ್ಲವೂ ಭಾರತದಲ್ಲಿ ತಯಾರಾಗಿದೆ. Mivi ಯ ಈ ಎರಡೂ ಸೌಂಡ್‌ಬಾರ್‌ಗಳನ್ನು ಕಂಪನಿಯ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನ ಸೈಟ್‌ನಿಂದ ಖರೀದಿಸಬಹುದು. ಇವುಗಳಲ್ಲಿ Mivi Fort S60 ಬೆಲೆ 3,499 ರೂ ಮತ್ತು Mivi Fort S100 ಬೆಲೆ 4,999 ರೂ.

ಎರಡೂ ಸೌಂಡ್‌ಬಾರ್‌ಗಳು 2.2 ಚಾನಲ್‌ಗಳೊಂದಿಗೆ ಬರುತ್ತವೆ. ಈ ಎರಡೂ ಸೌಂಡ್‌ಬಾರ್‌ಗಳೊಂದಿಗೆ ಉತ್ತಮ ಸರೌಂಡ್ ಸೌಂಡ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ. Bluetooth ಜೊತೆಗೆ, Aux, Co-Aux, USB ಮತ್ತು HDMI ಎರಡೂ ಸೌಂಡ್‌ಬಾರ್‌ಗಳಲ್ಲಿ ಕನೆಕ್ಟ್ವಿಟಿಯನ್ನ ಬೆಂಬಲಿಸುತ್ತವೆ.  ರಿಮೋಟ್ ನೊಂದಿಗೆ ಸೌಂಡ್‌ಬಾರ್‌ನ್ನ ನಿಯಂತ್ರಿಸಬಹುದು. ಜೊತೆಗೆ ಈಕ್ವಲೈಜರ್ ಮೋಡ್ ಅನ್ನು ಸಹ ಬಳಸಬಹುದು.

ಎರಡೂ ಸೌಂಡ್‌ಬಾರ್‌ಗಳು ಇನ್ ಬಿಲ್ಟ್ ವೂಫರ್‌ಗಳು ಮತ್ತು ಮೂರು ಈಕ್ವಲೈಜರ್ ಮೋಡ್‌ಗಳನ್ನು ಒಳಗೊಂಡಿದೆ. ಎರಡೂ ಸೌಂಡ್‌ಬಾರ್‌ಗಳು ಮೆಟಲ್ ಕೇಸ್ ನಿಂದ ಬಿಲ್ಟ್ ಆಗಿದ್ದು, ಇದರ ಫಿನಿಶಿಂಗ್ ಟಚ್  ಪ್ರೀಮಿಯಂ ಲುಕ್  ನೀಡುತ್ತದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd