mla aravinda limbavali | ಮಾನ ಮರ್ಯಾದೆ ಇದ್ಯಾ ? – ಮಹಿಳೆ ಮೇಲೆ ಶಾಸಕನ ದರ್ಪ!
ನಿನಗೆ ಮಾನ ಮರ್ಯಾದೆ ಇದ್ಯಾ ?
ಸಮಸ್ಯೆ ಹೇಳಲು ಬಂದ ಮಹಿಳೆ ಅವಾಜ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ನಿನಗೆ ನಾಚಿಕೆ ಆಗಲ್ವಾ ಎಂದು ಗರಂ
ಬೆಂಗಳೂರು : ಮನವಿ ಸಲ್ಲಿಸಲು ಬಂದ ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ಅವಾಜ್ ಹಾಕಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಳೆ ಹಾನಿ ಪ್ರದೇಶವನ್ನು ವೀಕ್ಷಿಸಲು ಅಧಿಕಾರಿಗಳೊಂದಿಗೆ ಅರವಿಂದ ಲಿಂಬಾವಳಿ ಬಂದಿದ್ದರು.

ಈ ವೇಳೆ ಅಲ್ಲಿಗೆ ಮಹಿಳೆಯೊಬ್ಬರು ತನ್ನ ಸಮಸ್ಯೆ ಹೇಳಿಕೊಳ್ಳಲು ಬಂದರು.
ಇದರಿಂದ ಕೋಪಗೊಂಡ ಶಾಸಕರು, ನಿನಗೆ ಮಾನ ಮರ್ಯಾದೆ ಇದ್ಯಾ ? ನಿನಗೆ ನಾಚಿಕೆ ಆಗಲ್ವಾ ಎಂದು ಅವಾಜ್ ಹಾಕಿದ್ದಾರೆ.
ಅಲ್ಲದೇ ಮಹಿಳೆಯನ್ನು ಸ್ಟೇಷನ್ ಗೆ ಕರೆದುಕೊಂಡು ಹೋಗಿ ಎಂದು ಕಿಡಿಕಾರಿದ್ದಾರೆ.








