ಹಾಸ್ಯ ನಟ ಎಂಎಂಎಸ್ ನಾರಾಯಣರ ಮೇಲೆ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ ನಟಿ..!

1 min read

ಹಾಸ್ಯ ನಟ ಎಂಎಂಎಸ್ ನಾರಾಯಣರ ಮೇಲೆ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ ನಟಿ..!

ಹೈದರಾಬಾದ್ : ಸಿನಿಮಾ ಜಗತ್ತಿನಲ್ಲಿ  ಕಾಸ್ಟಿಂಗ್ ಕೌಚ್ ಅನ್ನೋದು ಸಾಮಾನ್ಯವಾಗಿದೆ..  ನಟಿಯರು ಯಾವುದಾದರೂ ಒಂದು ಹಂತದಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆಯಿಂದ ಬಳಲಿರುತ್ತಾರೆ. ಈ ವಿರುದ್ಧ ಅನೇಕ ನಟಿಮಣಿಯರು ತಿರುಗಿಬಿದ್ದಿದ್ದು, ಸಮಾಜದ ಮುಂದೆ ಕಾಸ್ಟಿಂಗ್ ಕೌಚ್ ಕರಾಳ ಮುಖವಾಡವನ್ನ ಅನಾವರಣಗೊಳಿಸಿದ್ದಾರೆ. ಇದೀಗ ಇಂತಹದೊಂದು ಆರೋಪ ತೆಲುಗಿನ ಖ್ಯಾತ ಹಾಸ್ಯ ನಟ ಎಂಎಂಎಸ್ ನಾರಾಯಣನ ಮೇಲೆ ಹೊರಿಸಲಾಗಿದೆ.

ನಟಿ ಪದ್ಮ ಜಯಂತಿ ಹಿರಿಯ ಹಾಸ್ಯ ನಟ ಎಂಎಂಎಸ್ ನಾರಾಯಣ ಅವರ ಮೇಲೆ ಕ್ಯಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಯುಟ್ಯೂಬ್ ಚಾನೆಲ್ ನಲ್ಲಿ  ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಹಾಸ್ಯ ನಟ ಎಂಎಂಎಸ್ ನಾರಾಯಣ ಅವರು ಆಲ್ಕೋಹಾಲ್ ಸೇವಿಸಿದ ನಂತರ ಅವರ ಜೊತೆ ಕೆಟ್ಟದಾಗಿ ವರ್ತಿಸಿದ್ದಾರೆ. ನನ್ನನ್ನು ಕೋಣೆಗೆ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd