ಬೆಂಗಳೂರು: ಹೊಸ ವರ್ಷಕ್ಕೆ (New Year) ಬೆಂಗಳೂರಿನ ಡಿಸಿಪಿ (DCP) ರ್ಯಾಂಕ್ ಅಧಿಕಾರಿಗಳಿಗೆ ಮೊಬೈಲ್(Mobile Phone) ಗಿಫ್ಟ್ ಸಿಕ್ಕಿದೆ.
ಹೊಸ ವರ್ಷಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ವಿಶೇಷ ಜಿಪಿಎಸ್ ಟೆಕ್ನಾಲಜಿ ಅಳವಡಿಸಿರುವ ಸ್ಯಾಮ್ಸಂಗ್ ಮೊಬೈಲ್ ಉಡುಗೊರೆಯಾಗಿ (Gift) ನೀಡಲಾಗಿದೆ.
ಜ. 1ರಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೊಸ ವರ್ಷದ ಅಂಗವಾಗಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್ (Dayananda) ಫೋನ್ ವಿತರಿಸಿದ್ದಾರೆ. ಎಲ್ಲ ಡಿಸಿಪಿ ರ್ಯಾಂಕ್ ಅಧಿಕಾರಿಗಳು ಕಡ್ಡಾಯವಾಗಿ ಜಿಪಿಎಸ್ ಮೊಬೈಲ್ ಬಳಸಲು ಆದೇಶ ಹೊರಡಿಸಿದ್ದಾರೆ.
ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ...








