ಬೆಂಗಳೂರು : ನಗರದಲ್ಲಿ ರಾಬರಿ ಹಾಗೂ ಮರ್ಡರ್ ಪ್ರಕರಣ ಹೆಚ್ಚಾಗ್ತಿರೋ ಹಿನ್ನೆಲೆ ಮೊಬೈಲ್ ಸ್ನಾಚಿಂಗ್ ಬಗ್ಗೆಯೂ ಸಿರೀಯಸ್ ಆಗಿ ತೆಗೆದುಕೊಳ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ..
ಕೆಂಗೇರಿ ಪೊಲೀಸ್ರು ಕೂಡ ಕೊಲೆ ಆರೋಪಿಯನ್ನ ಹಿಡಿದಿದ್ದಾರೆ. ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ರು, ಪ್ರಕರಣ ಜಾಸ್ತಿಯಾಗ್ತಿದೆ. ಎಲ್ಲಾ ಕೇಸ್ ಗಳನ್ನ ವೈಯಕ್ತಿಕವಾಗಿ ತೆಗೆದುಕೊಂಡು ತನಿಖೆ ಮಾಡ್ತೀವೆ. ಹಾಡಹಗಲೇ ಲಾಂಗ್ ಮಚ್ಚು ಹಿಡಿದುಕೊಂಡು ಓಡಾಡ್ತಾರೆ. ಅಂಥವರ ವಿರುದ್ಧವೂ ಕ್ರಮಕೈಗೊಳ್ತೀವಿ ಎಂದಿದ್ದಾರೆ..
ಇನ್ನೂ ನಿನ್ನೆಯಿಂದ ಸ್ಪೆಷಲ್ ಡ್ರೈವ್ ಮಾಡಿ ಆರೋಪಿಗಳನ್ನ ಹಿಡಿಯುತ್ತಿದ್ದೇವೆ. ಕಾಫಿ ಶಾಫ್, ಆಟೋದಲ್ಲಿ ಮೊಬೈಲ್ ಬಿಟ್ಟು ಹೋದ್ರೆ ಈ ಲಾಸ್ಟ್ ಆಗುತ್ತೆ. ದರೋಡೆ ಮಾಡಿದ್ರೆ ಎಫ್ಐಆರ್ ದಾಖಲು ಮಾಡಿ ಆರೋಪಿಗಳನ್ನ ಬಂಧಿಸ್ತೀವಿ. ನಾನು ಈಗಾಗಲೇ ಅಧಿಕಾರಿಗಳ ಜೊತೆ ಮಾಸಿಕ ಸಭೆ ಮಾಡಿದ್ದೇವೆ. ೧೫ ದಿನಗಳಿಂದ ರಾಬರಿ ಕೇಸ್ ಗಳು ಜಾಸ್ತಿಯಾಗಿದೆ. ಕಂಟ್ರೋಲ್ ರೂಂ ಗೆ ಬಂದಿರುವ ದೂರನ್ನ ಪರಿಶೀಲನೆ ಮಾಡ್ತಿದ್ದೇವೆ. ಸರಿಯಾಗೆ ಕ್ರಮಕೈಗೊಂಡಿಲ್ಲ ಅಂದ್ರೆ ಇನ್ಸ್ ಪೆಕ್ಟರ್ ಹೊಣೆ ಎಂದಿದ್ದಾರೆ..