Bengaluru : ಕುಖ್ಯಾತ ಕಳ್ಳನ ಬಂಧಿಸಿದ ಜಯನಗರ ಪೊಲೀಸರು
ಬೆಂಗಳೂರು : ಬೈಕ್ ನಲ್ಲಿ ಬಂದು ಮೊಬೈಲ್ ಕಿತ್ತು ಪರಾರಿಯಾಗುತ್ತಿದ್ದ ಖತರ್ನಾಕ್ ಆರೋಪಿಯನ್ನ ಬಂಧಿಸುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೈಯ್ಯದ್ ಫವಾಜ್ ಬಂಧಿತ ಆರೋಪಿಯಾಗಿದ್ದಾನೆ.. ಈತ ದ್ವಿಚಕ್ರವಾಹನದಲ್ಲಿ ಹಿಂಬದಿಯಿಂದ ಬಂದು ಮೊಬೈಲ್ ಕಸಿದು ಎಸ್ಕೇಪ್ ಆಗ್ತಿದ್ದ.. ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ..
ಪೊಲೀಸರು ಬಂಧಿತನಿಂದ 15 ಲಕ್ಷ ಮೌಲ್ಯದ 65 ಮೊಬೈಲ್ ಪೊನ್ ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರಸ್ತೆಯಲ್ಲಿ ಒಬ್ಬಂಟಿಯಾಗಿ ಮೊಬೈಲ್ ನಲ್ಲಿ ಮಾತಾಡುತ್ತ ತೆರಳುತ್ತಿದ್ದವರನ್ನೆ ಈತ ಟಾರ್ಗೆಟ್ ಮಾಡುತ್ತಿದ್ದ. ಸಿದ್ದಾಪುರ ಬಿಟಿಎಂ ಲೇಔಟ್ ಮೈಕೋ ಲೇಔಟ್ ಬನಶಂಕರಿ ಬಸವನಗುಡಿ ಜಯನಗರ ವ್ಯಾಪ್ತಿಯಲ್ಲಿ ಕೃತ್ಯ ಎಸಗುತ್ತಿದ್ದ ೆಂಬ ಮಾಹಿತಿ ಲಭ್ಯವಾಗಿದೆ..








