ಜಗತ್ತು ಬಿಕ್ಕಟ್ಟಿಗೆ ಸಿಲುಕಿರುವಾಗ ಭಾರತ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿದೆ – ಪ್ರಧಾನಿ ಮೋದಿ.. .
ಭಾರತವು ಜಗತ್ತಿನಾದ್ಯಂತ ಹೂಡಿಕೆದಾರರಿಗೆ ಆದ್ಯತೆಯ ಹೂಡಿಕೆಯ ತಾಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿಯವರು “ಭಾರತವು ಹೊಸ ಆಲೋಚನೆಗಳು, ಹೊಸ ಪರಿಹಾರಗಳು ಮತ್ತು ತ್ವರಿತ ಅಭಿವೃದ್ಧಿಯ ಕೇಂದ್ರಬಿಂದುವಾಗಿದೆ ಮತ್ತು ಸರ್ಕಾರದ ಎಲ್ಲಾ ನೀತಿಗಳು ಸಾಮಾನ್ಯ ಜನರ ಕಲ್ಯಾಣವನ್ನ ಹೊಂದಿದೆ ಎಂದು ತಿಳಿಸಿದರು.
ಇಂದು ಜಗತ್ತು ಬಿಕ್ಕಟ್ಟಿಗೆ ಸಿಲುಕಿರುವಾಗ, ಭಾರತವು ಹಲವಾರು ಕ್ಷೇತ್ರಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ ಮತ್ತು ಇತಿಹಾಸವನ್ನ ಬರೆಯುತ್ತಿದೆ ಮತ್ತು ಜಗತ್ತು ಭಾರತದ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದರು.
ಇಂದು ವಿಶಾಖಪಟ್ಟಣದಲ್ಲಿ ಆರಂಭಿಸಲಾದ ಸಂಪರ್ಕ, ತೈಲ ಮತ್ತು ಅನಿಲ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳು ಆಂಧ್ರಪ್ರದೇಶದ ಬೆಳವಣಿಗೆಗೆ ಶಕ್ತಿ ತುಂಬಲಿವೆ ಎಂದು ಅವರು ಒತ್ತಿ ಹೇಳಿದರು. ವಿಶ್ವದೊಂದಿಗೆ ಭಾರತವನ್ನು ಸಂಪರ್ಕಿಸುವಲ್ಲಿ ವಿಶಾಖಪಟ್ಟಣಂ ಹೇಗೆ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಪ್ರಧಾನಿ ವಿವರಿಸಿದರು. ಪಶ್ಚಿಮ ಏಷ್ಯಾದಿಂದ ರೋಮ್ವರೆಗೆ ವಿಶಾಖಪಟ್ಟಣಂ ಬಂದರುಗಳು ಭಾರತದ ವ್ಯಾಪಾರ ಕೇಂದ್ರವಾಗಿದೆ ಎಂದು ಮೋದಿ ಹೇಳಿದರು.
ಡ್ರೋನ್ನಿಂದ ಗೇಮಿಂಗ್ವರೆಗೆ, ಸ್ಪೇಸ್ನಿಂದ ಸ್ಟಾರ್ಟ್ಅಪ್ಗಳವರೆಗೆ, ಪ್ರತಿಯೊಂದು ಕ್ಷೇತ್ರವೂ ಈಗ ಮುಂದುವರಿಯಲು ಅವಕಾಶವನ್ನು ಪಡೆಯುತ್ತಿದೆ ಎಂದು ಮೋದಿ ಹೇಳಿದರು.
Modi AP Tour: PM lays foundation stones for five projects in Visakhapatnam








