ಭಾರತದ ಸಾಮರ್ಥ್ಯವನ್ನ ಜಗತ್ತಿಗೆ ತೋರಿಸಿದ ಲಸಿಕೆ – ಮನ್ ಕಿ ಬಾತ್ ನಲ್ಲಿ ಮೋದಿ
ನೂರು ಕೋಟಿ ಜನರಿಗೆ ಲಸಿಕೆ ಹಾಕುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನ ಇಡೀ ವಿಶ್ವದ ಎದುರು ಅನಾವರಣ ಮಾಡಿದೆ..ಇದು ನಮ್ಮ ದೇಶದ ಶಕ್ತಿ ಸಾಮರ್ಥ್ಯಗಳನ್ನ ತೋರಿಸುತ್ತೆ ಎಂದು ಮನ್ ಕಿ ಬಾತ್ ನಲ್ಲಿ ಮೋದಿ ಹೇಳಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರು 82ನೇ ಆವೃತ್ತಿಯ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು. ಅಕ್ಟೋಬರ್ 31 ರಂದು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತೇವೆ. ಅಂದು ನಾವೆಲ್ಲರು ಏಕತಾ ದಿನವನ್ನ ಪ್ರಚಾರಪಡಿಸುವಂತಹ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮೋದಿ ಕರೆ ನೀಡಿದರು.
ಮುಂದಿನ ತಿಂಗಳು ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರ ಜಯಂತಿಯನ್ನ ಭಾರತ ಆಚರಿಸಲಿದೆ. ಸಂಸ್ಕೃತಿ ಮತ್ತು ಆಚರಣೆಗಳನ್ನ ಹೇಗೆ ಗೌರವಿಸಬೇಕು ಎಂಬುದನ್ನ ಇವರ ಜೀವನ ತಿಳಿಸಲಿದೆ. ದೇಶದ ಯುವಕರು ಇವರ ಜೀವನ ಚರಿತ್ರೆಯನ್ನ ಓದಬೇಕು ಎಂದು ಮೋದಿ ಎಂದು ತಿಳಿಸಿದರು.








