ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ : ಪ್ರಧಾನಿ ನರೇಂದ್ರ ಮೋದಿ
ವಿಶ್ವಾದ್ಯಂತ ಕೊರೋನಾ ಹಾವಳಿಯ ನಡುವೆ ರೂಪಾಂತರಿ ಆತಂಕ ಹೆಚ್ಚಾಗಿದೆ.. ದೇಶದಲ್ಲೂ ದಿನೇ ದಿನೇ ಒಮಿಕ್ರಾನ್ ಆತಂಕ ಹೆಚ್ಚಾಗಿರುವ ಹಿನ್ನೆಲೆ ಇದೀಗ ದೇಶದ ಜನತೆಗೆ ಬೂಸ್ಟರ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ..
ಕೋವಿಡ್–19 ಲಸಿಕೆ ಅಭಿಯಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ಮಹತ್ವದ ನಿರ್ಧಾರಗಳನ್ನ ಪ್ರಕಟಿಸಿದ್ದಾರೆ.. ಇದೇ ವೇಳೆ ಬೂಸ್ಟರ್ ಡೋಸ್ ಕುರಿತಾಗಿಯೂ ತಿಳಿಸಿದ್ದಾರೆ. ದೇಶದ ಮುಂಚೂಣಿ ಕಾರ್ಯಕರ್ತರ ಜೊತೆ, ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 60 ವರ್ಷ ಮೇಲ್ಪಟ್ಟವರು ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್ ಡೋಸ್ ಪಡೆಯಬಹುದು. ಆದರೆ ಅವರು ವೈದ್ಯರಿಂದ ಶಿಫಾರಸ್ಸು ಪಡೆದಿರಬೇಕು. ಅವರಿಗೂ ಜ.10 ರಿಂದಲೇ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್ ವಿರುದ್ಧದ ಜಗತ್ತಿನ ಮೊದಲ ಡಿಎನ್ಎ ಲಸಿಕೆ ಮತ್ತು ಮೂಗಿನ ಮೂಲಕ ನೀಡಲಾಗುವ ಲಸಿಕೆಗಳನ್ನು ಸದ್ಯದಲ್ಲೇ ಭಾರತದಲ್ಲೂ ನೀಡಲಾಗುವುದು ಎಂದಿದ್ದಾರೆ ಮೋದಿ..