ಮೋದಿಗೆ ರಾಷ್ಟ್ರಪ್ರೇಮದ ಬಗ್ಗೆ ಟ್ವೀಟ್ ಮಾಡೋ ಯೋಗತ್ಯೆ ಇಲ್ಲ : ಮೊಯ್ಲಿ Modi saaksha tv
ಮಂಡ್ಯ : ಪ್ರಧಾನಿ ನರೇಂದ್ರ ಮೋದಿಗೆ ರಾಷ್ಟ್ರಪ್ರೇಮ, ಭಕ್ತಿ ಬಗ್ಗೆ ಟ್ವೀಟ್ ಮಾಡುವ ಯೋಗ್ಯತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಅವರು, ಏಕತೆ, ಸಮಗ್ರತೆ ವಿಚಾರದಲ್ಲಿ ರಾಷ್ಟ್ರಕ್ಕೆ ದೊಡ್ಡ ಏಟು ಬೀಳುತ್ತಿದೆ. ನ್ಯಾಯಾಧೀಶರಿಗೆ ಇವತ್ತು ರಕ್ಷಣೆ ಇಲ್ಲ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ಗೌರವ ಇಲ್ಲ. ದೇಶದ ಆರ್ಥಿಕ ತಳಮಟ್ಟ ಬುಡಮೇಲಾಗ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಗುಡುಗಿದ ಮೊಹ್ಲಿ, ಮೋದಿ ಎಲ್ಲದಕ್ಕೂ ಟ್ವೀಟ್ ಮಾಡ್ತಾರೆ. ರಾಷ್ಟ್ರ ಪ್ರೇಮ, ಭಕ್ತಿ ಬಗ್ಗೆ ಟ್ವೀಟ್ ಮಾಡುವ ಯೋಗ್ಯತೆ ಮೋದಿಗೆ ಇಲ್ಲ. ಮತೀಯತೆ ದೇಶದಲ್ಲಿ ತಲೆ ಎತ್ತಿದೆ. ಇದನ್ನ ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಹೇಳಿದ್ದಾರೆ. ಇದಕ್ಕೆ ಪ್ರಧಾನಿ ಮೋದಿಯವರೇ ಕಾರಣ ಎಂದು ದೂರಿದರು.









