ಮೋದಿ ಅಭಿಮಾನಿಗಳು “ಗಂಧ(ಕೊಳಕು)ಭಕ್ತರಂತೆ : ಸುಬ್ರಮಣಿಯನ್ ಟ್ವೀಟ್
ನವದೆಹಲಿ : ಕೇಂದ್ರ ಸರ್ಕಾರದ ನಡೆಗಳ ವಿರುದ್ಧ ಅದರಲ್ಲೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪದೇ ಪದೇ ಕೆಂಡಕಾರುವ ಬಿಜೆಪಿ ಹಿರಿಯ ಸಂಸದ ಸುಬ್ರಮಣಿಯನ್ ಸ್ವಾಮಿ ಇದೀಗ ಬಿಜೆಪಿ ಅಭಿಮಾನಿಗಳನ್ನ ಅಂಧಭಕ್ತರು ಎಂದು ವ್ಯಂಗ್ಯವಾಡಿದ್ದಾರೆ.
ಕೊರೊನಾ ವಿಚಾರವಾಗಿ ಸುಬ್ರಮಣಿಯನ್ ಸ್ವಾಮಿ, ನರೇಂದ್ರ ಮೋದಿ ಅವರನ್ನ ಟೀಕೆ ಮಾಡಿದ್ದು, ಈ ಕುರಿತು ಟ್ವಟ್ಟರ್ ನಲ್ಲಿ ‘2020ರ ಏಪ್ರಿಲ್ ಮಧ್ಯದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಕರಣಗಳು ದಿನವೂ 1 ಲಕ್ಷದಷ್ಟು ವರದಿಯಾಗುತ್ತಿದ್ದು, ನವೆಂಬರ್ ವೇಳೆಗೆ 10,000ಕ್ಕೆ ಇಳಿಯಿತು. ಅಂಧಭಕ್ತರು ಮತ್ತು ಗಂಧಭಕ್ತರು (ಕೊಳಕು) ಯಾರಿಗೆ ಅದರ ಶ್ರೇಯಸ್ಸು ನೀಡಿದ್ದರು? ಈಗ ಪ್ರಕರಣಗಳು ಮತ್ತೆ ಒಂದು ಲಕ್ಷಕ್ಕೆ ಏರಿಕೆಯಾಗುತ್ತಿವೆ. ಹಾಗಾದರೆ ಈಗ ಯಾರು ಶ್ರೇಯಸ್ಸು ತಮ್ಮದು ಎಂದು ಹೇಳಿಕೊಳ್ಳುತ್ತಾರೆ?’ ಎಂದು ಟೀಕಿಸಿದ್ದಾರೆ.
ತಮ್ಮದೇ ಸರ್ಕಾರ ಹಾಗೂ ಪಕ್ಷದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಪೋಸ್ಟ್ ಮಾಡಿರುವ ಟ್ವೀಟ್, ಬಿಜೆಪಿಗೆ ಕಸಿವಿಸಿ ಉಂಟುಮಾಡಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ, ಮೋದಿ ಅಭಿಮಾನಿಗಳು ಸುಬ್ರಮಣಿಯನ್ ಸ್ವಾಮಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಇನ್ನೊಂದೆಡೆ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
