ಲಸಿಕಾಕರಣದಲ್ಲಿ ಐತಿಹಾಸಿಕ ಮೈಲಿಗಲ್ಲು – 150 ಕೋಟಿ ವ್ಯಾಕ್ಸಿನ್ ಲಸಿಕೆ ನೀಡಿಕೆ
ದೇಶದಲ್ಲಿ ಕೋವಿಡ್-19 ಲಸಿಕೆ ಅಭಿಯಾನದಡಿಯಲ್ಲಿ ನೀಡಲಾದ ಡೋಸ್ಗಳ ಸಂಖ್ಯೆ ಶುಕ್ರವಾರ 150 ಕೋಟಿ ಗಡಿ ದಾಟಿದೆ. ಈ ಮೈಲಿಗಲ್ಲಿನ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇವತ್ತಿನ ದಿನದಂದು ಮಧ್ಯಾಹ್ನ 2.20 ರ ಹೊತ್ತಿಗೆ ಅರ್ಹ ಫಲಾನುಭವಿಗಳಿಗೆ 1,50,17,23,911 ಡೋಸ್ ಲಸಿಕೆಗಳನ್ನು ನೀಡಲಾಯಿತು ಎಂದು ಕೋ-ವಿನ್ ಡ್ಯಾಶ್ಬೋರ್ಡ್ನಿಂದ ಡೇಟಾ ತೋರಿಸಿದೆ.
ಮೋದಿ ಅವರು ಈ ಸಾಧನೆಯನ್ನು “ಐತಿಹಾಸಿಕ ಮೈಲಿಗಲ್ಲು” ಎಂದು ಕರೆದಿದ್ದಾರೆ ದೇಶದ ವಿಜ್ಞಾನಿಗಳು ಮತ್ತು ಲಸಿಕೆ ತಯಾರಕರಿಗೆ ಧನ್ಯವಾದ ಅರ್ಪಿಸಿದರು.
“ದೇಶವು 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡುವ ಮೂಲಕ 2022 ಪ್ರಾರಂಭಿಸಿದೆ” ಎಂದು ಅವರು ಹೇಳಿದರು. “ಅದೇ ಸಮಯದಲ್ಲಿ, ವರ್ಷದ ಮೊದಲ ತಿಂಗಳ ಮೊದಲ ವಾರದಲ್ಲಿ, ಭಾರತವು 150 ಕೋಟಿ, 1.5 ಬಿಲಿಯನ್, ಲಸಿಕೆ ಡೋಸ್ಗಳ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸುತ್ತಿದೆ” ಎಂದು ಅವರು ಹೇಳಿದರು.
ಕೋಲ್ಕತ್ತಾದಲ್ಲಿ ಚಿತ್ತರಂಜನ್ ನ್ಯಾಶನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಸಿಎನ್ಸಿಐ) ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಉಪಸ್ಥಿತರಿದ್ದರು.